ಮಡಿಕೇರಿ, ಜ. 17: ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ 3 ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ ತ್ರೈಮಾಸಿಕ ಪೊಂಗುರಿ ಸಂಚಿಕೆಗೆ ಸಂಬಂಧಪಟ್ಟಂತೆ ಏಂಖಏಔಆ/2016/69586 ಪರವಾನಿಗೆ ದೊರೆತ್ತಿದ್ದು, ಯುವ ಸಾಹಿತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಇದುವರೆಗೆ ಎಲ್ಲಿಯೂ ಪ್ರಕಟವಾಗದ, ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕತೆ, ಕವನ, ಚುಟುಕು, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ ಮೊದಲಾದವುಗಳನ್ನು ತಾ. 26 ರೊಳಗೆ ಅಧ್ಯಕ್ಷರು-ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ, ಸ್ಕೌಟ್ ಭವನ, ಜಿಲ್ಲಾ ಕ್ರೀಡಾಂಗಣ, ಇಲ್ಲಿಗೆ ತಲುಪಿಸುವಂತೆ ಕೋರಿದೆ. ಅರ್ಹ ಲೇಖನ ಇತ್ಯಾದಿಗಳನ್ನು ಪೊಂಗುರಿ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಗಿರೀಶ್ ತಿಳಿಸಿದ್ದಾರೆ.