ಮಡಿಕೇರಿ, ಜ. 17: ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಚಿತ್ರಕಲಾ ಕ್ಷೇತ್ರದಲ್ಲಿ ಸಂಶೋಧನಾ/ಕಲಾ ಅಧ್ಯಯನ ಮಾಡಲು ಆಸಕ್ತಿ ಹೊಂದಿದ ಸಾಧಕರು, ಲಲಿತಕಲಾ ಶಿಷ್ಯ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ ವಯೋಮಿತಿ 26 ವರ್ಷಗಳಾಗಿವೆ. ಈ ಶಿಷ್ಯವೇತನ ಕಾಲಾವಧಿಯು ಒಂದು ವರ್ಷದ್ದಾಗಿದ್ದು, ಆಸಕ್ತರು ನೇರವಾಗಿ ದೃಶ್ಯ ಕಲೆಗೆ ಸಂಬಂಧಿಸಿದ ವಿಷಯಗಳನ್ನು ಆರಿಸಿಕೊಂಡು ಕಲಾಕೃತಿ/ಸಂಶೋಧನಾ ಪ್ರಬಂಧಗಳನ್ನು ರಚಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವಾಗ ಸಂಶೋಧನೆಗೆ ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ 5-6 ಪುಟಗಳ ಲೇಖನವನ್ನು ಅರ್ಜಿ ಯೊಂದಿಗೆ ಸಲ್ಲಿಸುವುದು ಕಡ್ಡಾಯ. ಅರ್ಜಿ ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560002 ಅಥವಾ ದೂ. 080-22480297 ನ್ನು ಸಂಪರ್ಕಿಸಬಹುದು.