ಕುಶಾಲನಗರ, ಜ. 17: ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಥಾ ಅಭಿಯಾನದ ಅಂಗವಾಗಿ ಕುಶಾಲನಗರ ಆಟೋ ಚಾಲಕರ ಸಂಘದ ಆಶ್ರಯದೊಂದಿಗೆ ಕೊಡಗು ಪೆÇಲೀಸ್ ಇಲಾಖೆ ಜಂಟಿಯಾಗಿ ಆಟೋಗಳ ಮೆರವಣಿಗೆ ಮೂಲಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಕುಶಾಲನಗರ ನಗರ ಠಾಣೆಯ ಆವರಣದಿಂದ ಹೊರಟ ಮೆರವಣಿಗೆಗೆ ಪೆÇಲೀಸ್ ಉಪ ಅಧೀಕ್ಷಕ ಶೈಲೇಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆಟೋ ಚಾಲಕರು ಸಮಾಜದಲ್ಲಿ ಬಹಳ ಪ್ರಮುಖ ಸ್ಥಾನವನ್ನು ಹೊಂದಿದ್ದು, ಆ ಮೂಲಕ ರಸ್ತೆ ಸುರಕ್ಷತೆ ಬಗ್ಗೆ, ಜಾಗೃತಿ ಮೂಡಿಸುವ ಪ್ರಯತ್ನವನ್ನು ಕೂಡಾ ಮಾಡಬೇಕು. ಆಟೋ ಚಾಲಕರ ಗುರುತು ಮತ್ತು ಆಟೋಗಳ ದಾಖಲೆಗಳನ್ನು ಒಳಗೊಂಡಂತೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಉದ್ದೇಶವನ್ನು ಪೆÇಲೀಸ್ ಇಲಾಖೆ ಹೊಂದಿದೆ. ಆಟೋ ಚಾಲಕರು ನಮ್ಮ ಟ್ರಾಫಿಕ್ ಪೆÇಲೀಸ್ ಸ್ಟೇಷನ್ನಲ್ಲಿ ತಮ್ಮ ಆಟೋ ಮತ್ತು ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ. ಚಾಲಕರು ಸಮªಸ್ತ್ರವನ್ನು ಧರಿಸಿ ನಾಗರಿಕರ ಜೊತೆಯಲ್ಲಿ ಸಂಯಮದಿಂದ ವರ್ತಿಸಬೇಕು. ಮತ್ತು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಆಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಮತ್ತು ಸಂಚಾರಿ ಠಾಣಾಧಿಕಾರಿ ಅಚ್ಚಮ್ಮ ಮತ್ತು ಸಿಬ್ಬಂದಿಗಳು ಇದ್ದರು.