ಸಿದ್ದಾಪುರ, ಜ. 18: ನೆಲ್ಯಹುದಿಕೇರಿ ಸಮುದಾಯ ಭವನವನ್ನು ಶಾಸಕ ಎನ್.ಎ. ಹ್ಯಾರಿಸ್ ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ನೆಲ್ಯಹುದಿಕೇರಿಯ ಸಮುದಾಯ ಭವನಕ್ಕೆ ತನ್ನಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕೆಂದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಚಂದ್ರ ಮೌಳಿ, ಎಸ್.ಎನ್.ಡಿ.ಪಿ. ಅಧ್ಯಕ್ಷ ವಿ.ಕೆ ಲೋಕೇಶ್ ಇತರರು ಮಾತನಾಡಿದರು.

ಸಭಾ ವೇದಿಕೆಯಲ್ಲಿ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಯಾಕೂಬ್ , ಸಮುದಾಯ ಭವನದ ನಿರ್ಮಾಣ ಸಮಿತಿ ಅಧ್ಯಕ್ಷ ಎ.ಕೆ. ಅಬ್ದುಲ್ಲಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯೆ ಸುಹದಾ ಅಶ್ರಪ್, ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ,ಉಪಾಧ್ಯಕ್ಷೆ ಸಫಿಯಾ, ಪ್ರಮುಖರಾದ ಪಿ.ಆರ್. ಭರತ್, ಜೋಸೆಫ್ ಶ್ಯಾಂ ಮತ್ತಿತರರು ಹಾಜರಿದ್ದರು.

ಎ.ಕೆ. ಹಕೀಂ ಸ್ವಾಗತಿಸಿ, ಎಂ.ಎ. ಅಜೀಜ್ ನಿರೂಪಿಸಿ, ಎ.ಎ. ಅಬ್ದುಲ್ಲಾ ವಂದಿಸಿದರು.