ಮಡಿಕೇರಿ, ಜ. 18: ಮಡಿಕೇರಿಯಲ್ಲಿ ಮುಳಿಯ ಜ್ಯುವೆಲ್ಸ್‍ನ ನೂತನ ಕಟ್ಟಡ ಅಮೂಲ್ಯಾವನ್ನು ಖ್ಯಾತ ಚಿತ್ರನಟಿ ಹರ್ಷಿಕಾ ಪೂಣಚ್ಚ ಲೋಕಾರ್ಪಣೆಗೊಳಿಸಿದರು.

ಮಡಿಕೇರಿಯ ಮಹದೇವಪೇಟೆಯಲ್ಲಿ ನಿರ್ಮಾಣಗೊಂಡಿರುವ ಮುಳಿಯ ಜ್ಯುವೆಲ್ಸ್‍ನ ಸ್ವಂತ ಕಟ್ಟಡವಾದ ಅಮೂಲ್ಯಾವನ್ನು ಉದ್ಘಾಟಿಸಿ ಮಾತನಾಡಿದ ಹರ್ಷಿಕಾ ಪೂಣಚ್ಚ, ವೈವಿಧ್ಯಮಯ ಚಿನ್ನಾಭರಣಗಳಿಗೆ ಮುಳಿಯ ಜ್ಯುವೆಲ್ಸ್ ಸಂಸ್ಥೆ ಅತ್ಯಂತ ಹೆಸರುವಾಸಿಯಾಗಿದೆ. ಚಿನ್ನಾಭರಣ ಹಾಕಲು ಇಷ್ಟವಿಲ್ಲದವರಿಗೂ ಮುಳಿಯ ಸಂಸ್ಥೆಯ ಬೆಳ್ಳಿಯ ಆಭರಣಗಳು ಮನಮೆಚ್ಚುವಂತಿದೆ ಎಂದು ಶ್ಲಾಘಿಸಿದರು. ಕಳೆದ 12 ವರ್ಷಗಳಿಂದಲೂ ಮುಳಿಯ ಸಂಸ್ಥೆಯ ರಾಯಭಾರಿ ಯಾಗಿರುವ ತನಗೆ ಈ ಸಂಸ್ಥೆಯ ಮೂಲಕ ಸಾಕಷ್ಟು ಖ್ಯಾತಿ ದೊರಕಿದೆ ಎಂದೂ ಹರ್ಷಿಕಾ ಪೂಣಚ್ಚ ಸ್ಮರಿಸಿಕೊಂಡರು.