ಶ್ರೀಮಂಗಲ, ಜ. 17: ಶಾಲೆಗಳಿಗೆ ಸರಕಾರದ ಇತ್ತೀಚೆಗಿನ ಆದೇಶಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು, ಕೊಡಗು ಅನುದಾನ ರಹಿತ ಶಾಲಾ ಆಡಳಿತ ಸಂಘದ ವಿಶೇಷ ಸಭೆ ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಕುಶಾಲನಗರದ ಉದ್ಗಂ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ತಿಳಿಸಿದ್ದಾರೆ.