ಸೋಮವಾರಪೇಟೆ, ಜ. 14: ಪ್ರಸಕ್ತ ವರ್ಷ ಭಾರತೀಯ ಹಜ್ ಸಮಿತಿ ಮೂಲಕ ಪವಿತ್ರ ಹಜ್ಜ್ ಯಾತ್ರೆ ನಡೆಸಲು ಅರ್ಜಿ ಸಲ್ಲಿಸಿರುವ ಕೊಡಗು ಜಿಲ್ಲೆಯ ಎಲ್ಲ ಯಾತ್ರಾರ್ಥಿ ಗಳು ನೇರವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಗೆ ನೀಡಲಾಗಿದ್ದ ಕೋಟಾಕ್ಕಿಂತ ಕಡಿಮೆ ಅರ್ಜಿಗಳು ಬಂದಿರುವದರಿಂದ ಆನ್ಲೈನ್ ಆಯ್ಕೆಗೆ ಒಳಪಡಿಸದೆ ನೇರ ಅವಕಾಶ ನೀಡಲಾಗುತ್ತಿದೆ ಎಂದು ರಾಜ್ಯ ಹಜ್ ಸಮಿತಿ ಸದಸ್ಯರೂ ಆಗಿರುವ ಸೋಮವಾರಪೇಟೆ ಮಸೀದಿ ಧರ್ಮಗುರು ಮೌಲಾನಾ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ತಿಳಿಸಿದ್ದಾರೆ.ಭಾರತ ಸರ್ಕಾರವು ಕರ್ನಾಟಕಕ್ಕೆ 6734 ಹಜ್ ಕೋಟಾ ನಿಗದಿಪಡಿ ಸಿದ್ದು, ಇವುಗಳನ್ನು ಪ್ರತಿ ಜಿಲ್ಲೆಗೂ ಆಯಾ ಜಿಲ್ಲೆಯ ಮುಸ್ಲಿಂ ಜನಸಂಖ್ಯಾ ನುಪಾತದಲ್ಲಿ ವಿತರಿಸಲಾಗುತ್ತಿದೆ. ಈ ಪ್ರಕಾರ ಕೊಡಗು ಜಿಲ್ಲೆಗೆ 69 ಕೋಟಾ ಗಳನ್ನು ನೀಡಲಾಗಿದ್ದು, 51 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಯಾತ್ರೆಗೆ ಅವಕಾಶ ಒದಗಿಸಲಾಗಿದೆ.
ಮುಖ್ಯಮಂತ್ರಿ ಚಾಲನೆ: 2020ರ ಹಜ್ ಯಾತ್ರಾರ್ಥಿಗಳನ್ನು ಆರಿಸುವ ‘ಖುರ್ರಾ' ಪ್ರಕ್ರಿಯೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದರು.