ವೀರಾಜಪೇಟೆ, ಜ. 14: ಕವನಗಳಲ್ಲಿ ಗಟ್ಟಿತನದÀ ಭಾವನೆಗಳಿರಬೇಕು. ಹಿಂದಿನ ಕಾವ್ಯ ಕವನಗಳಲ್ಲಿ ಗೆಯತೆ ಇರÀುವುದರಿಂದ ಅವು ಇಂದಿಗೂ ಉಳಿದುಕೊಂಡು ಮನೆಮಾತಾಗಿದೆ ಎಂದು ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಹೇಳೀದರು.

ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್, ತೂಕ್ ಬೊಳಕ್, ಕಲೆ, ಕ್ರೀಡೆ, ಸಾಹಿತ್ಯ ಅಕಾಡಮಿ ಇವರ ಸಹಯೋಗದಲ್ಲಿ ಪೂಮಾಲೆ ಮಂದ್‍ನಲ್ಲಿ ನಡೆದ ಸಂಕ್ರಾಂತಿ ಬಹುಭಾಷ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕವನಗಳು ಅತ್ಯಂತ ಸರಳ ಭಾಷೆ ಯಲ್ಲಿರಬೇಕು. ಕನ್ನಡ ಭಾಷೆಯನ್ನು ಬಳಸುವಾಗ ಶುದ್ಧತೆಯನ್ನು ಅನುಸರಿಸಬೇಕು ಎಂದು ಹೇಳಿದರು. ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತ್ಯಗಳು ಬೆಳೆದು ಬರಬೇಕಾದರೆ ಸಾಹಿತಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಹಾಗೂ ಸಹಾಯ ದೊರೆಯಬೇಕು ಎಂದು ಹೇಳಿದರು.

ಸಾಹಿತಿ ಚಿಪ್ಪಿಕಾರ್ಯಪ್ಪ ಬರೆದ ಚಿಂತನಾ ಪುಸ್ತಕವನ್ನು ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಬಿಡುಗಡೆ ಗೊಳಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರಕ್ಷಾ ಶಂಕರ್(ಅಂತರ್ರಾಷ್ಟ್ರೀಯ ಭರತನಾಟ್ಯ ಕಲಾವಿದೆ), ಬಿ.ಆರ್ ಸತೀಶ್ (ಚಿತ್ರಕಲೆ), ಟಿ.ಡಿ ಮೋಹನ್, ಮಾಳೇಟಿರ ಅಜೀತ್ ಪೊನ್ನಣ್ಣ, ಬಟ್ಟಿಯಂಡ ಲಿಖಿತಾ ಪಳಂಗಪ್ಪ (ಹಾಡುಗಾರಿಕೆ) ಇವರುಗಳನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯಲ್ಲಿ ಒಟ್ಟು 30 ಕವಿಗಳು ಕವನ ವಾಚಿಸಿದರು.

ಮಾಳೇಟಿರ ಅಜಿತ್ ಪೊನ್ನಣ್ಣ, ಬಟ್ಟಿಯಂಡ ಲಿಖಿತಾ ಪಳಂಗಪ್ಪ, ಟಿ.ಡಿ ಮೋಹನ್ ಅವರ ಗಾಯನಕ್ಕೆ ಚಿತ್ರ ಕಲಾವಿದ ಬಿ.ಆರ್ ಸತೀಶ್ ಚಿತ್ರ ಬಿಡಿಸುವುದರ ಮೂಲಕಮೆರಗು ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೆಶ್ ಸಾಗರ, ಖಜಾಂಚಿ ಮರುಳಿ, ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಸಾಹಿತಿಗಳಾದ ಪ್ರೋ ದಂಬೆಕೋಡಿ ಸುಶೀಲಾ ಸುಬ್ರಮಣಿ, ತಾತಂಡ ರಾಣಿ ನಂಜಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಭುಕುಮಾರ್, ತೂಕ್ ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಶಂಕರಿ ಪೊನ್ನಪ್ಪ, ಕೇಶವ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.