ಮಡಿಕೇರಿ, ಜ. 14: ಗೋಣಿಕೊಪ್ಪ ಸಮೀಪದ ಕಳತ್ಮಾಡು ಲಯನ್ಸ್ ಶಿಕ್ಷಣ ಸಂಸ್ಥೆಗಳಾದ ಲಯನ್ಸ್ ಪ್ರೌಢಶಾಲೆ ಹಾಗೂ ಲಯನ್ಸ್ ಕಾಲೇಜು ಇದರ ಕ್ರೀಡೋತ್ಸವ ತಾ. 18 ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಅಂತರ್ರಾಷ್ಟ್ರೀಯ ಮಾಜಿ ಹಾಕಿ ಕ್ರೀಡಾಪಟು ಮಂಡೇಪಂಡ ಕೆ. ಪ್ರಕಾಶ್ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿತಿಗಳಾಗಿ ಲಯನ್ಸ್ ಚೇರ್ಮನ್ ಕೆ.ಎಸ್. ಚಂಗಪ್ಪ, ಅಧ್ಯಕ್ಷ ಕೆ. ನಿತಿ ಪೂಣಚ್ಚ, ಲಯನ್ಸ್ ಕಾಲೇಜು ಪ್ರಾಂಶುಪಾಲೆ ಕೆ.ಸಿ. ಪವಿತ್ರ, ಲಯನ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎ.ಬಿ. ಅಕ್ಕಮ್ಮ, ಲಯನ್ಸ್ ಪ್ರಾಥಮಿಕ ಹಾಗೂ ನರ್ಸರಿ ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಡಿ. ತಂಗಮ್ಮ, ಲಯನ್ಸ್ ಶಿಕ್ಷಣ ಸಂಸ್ಥೆಯ ಕ್ರೀಡಾ ನಾಯಕರಾದ ನಾಣಯ್ಯ, ಐ.ಎ. ಪುಷ್ಯ ಕೆ.ಪಿ., ವರುಣ್ ಮಾದಪ್ಪ ಭಾಗವಹಿಸಲಿದ್ದಾರೆ.