ಮಡಿಕೇರಿ, ಜ. 13: ಇಲ್ಲಿಗೆ ಸಮೀಪದ ಮದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ರೂ. 3.50 ಕೋಟಿ ಮೊತ್ತದ ರಸ್ತೆ- ಸೇತುವೆ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ. ವತಿಯಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಸೇತುವೆ ಕಾಮಗಾರಿಗಳನ್ನು ರೂ.3.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಯಡಿಯೂರಪ್ಪ ಬಿಜೆಪಿ ಸರಕಾರ ಬಂದ ಬಳಿಕ ಜಿಲ್ಲೆಗೆ ರಸ್ತೆ-ಸೇತುವೆ ಅಭಿವೃದ್ಧಿಗೆ ಹೆಚ್ಚಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವುದರೊಂದಿಗೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸಕ ಬೋಪಯ್ಯ ಗ್ರಾಮಸ್ಥರಲ್ಲಿ ಕೋರಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ಕೊಡಪಾಲು ಗಣಪತಿ, ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ್, ಉಪಾಧ್ಯಕ್ಷ ಕಿಮ್ಮುಡಿರ ಜಗದೀಶ್, ಎ.ಪಿ.ಎಂ.ಸಿ. ಸದಸ್ಯ ಬೆಪ್ಪುರನ ಮೇದಪ್ಪ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬೆಳಿಯಂಡ್ರ ರವಿ, ಅಭಿಯಂತರರುಗಳಾದ ಶ್ರೀಕಂಠಯ್ಯ, ಶಿವರಾಮ್ ಇನ್ನಿತರರಿದ್ದರು.