ವೀರಾಜಪೇಟೆ, ಜ. 13:ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಲೆತಿರಿಕೆಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ 2020ರ ಪಂಚಾಗದ ಪ್ರಕಾರ ತಾ:15ರಂದು ಮಕರ ಸಂಕ್ರಮಣ ಉತ್ಸವ ಹಾಗೂ ಮಕರ ಜ್ಯೋತಿ ಪೂಜೆ ನಡೆಯಲಿದೆ ಎಂದು ಅಯ್ಯಪ್ಪ ಸೇವಾ ಸಮಿತಿಯು ತಿಳಿಸಿದೆ.

ಅಂದು ಬೆಳಗ್ಗಿನಿಂದಲೇ ದೇವರಿಗೆ ಸಾಂಪ್ರದಾಯಿಕ ಅಭಿಷೇಕಗಳು, ರಾತ್ರಿ 6-45ಗಂಟೆಗೆ ಮಹಾ ಪೂಜಾ ಸೇವೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.