ಸಿದ್ದಾಪುರ, ಜ. 12: ಸಿದ್ದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಆಟೋ ಚಾಲನೆ ಮಾಡುತ್ತಿರುವ ಎಲ್ಲಾ ಆಟೋ ಚಾಲಕರು ಹಾಗೂ ಮಾಲೀಕರು ಎಸ್.ಡಿ.ಪಿ.ಎಸ್. ನೋಂದಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕೆಂದು ಸಿದ್ದಾಪುರ ಠಾಣಾಧಿಕಾರಿ ಹೆಚ್.ಸಿ. ಬೋಜಪ್ಪ ಅವರು ಸೂಚನೆ ನೀಡಿದ್ದಾರೆ.

ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ, ಪಾಲಿಬೆಟ್ಟ, ಕಳತ್ಮಾಡು, ಹೊಸೂರು ಬೆಟ್ಟಗೇರಿ, ಹಾಲುಗುಂದ, ವಾಲ್ನೂರು-ತ್ಯಾಗತ್ತೂರು ಸೇರಿದಂತೆ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಆಟೋ ಚಾಲನೆ ಮಾಡುತ್ತಿರುವ ಚಾಲಕರು ಹಾಗೂ ಮಾಲೀಕರು ತಮ್ಮ ಅಧಿಕೃತ ದಾಖಲಾತಿಗಳನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ತಂದು ಎಸ್.ಡಿ.ಪಿ.ಎಸ್. ನೋಂದಾಣಿ ಸಂಖ್ಯೆಯನ್ನು ಪಡೆದುಕೊಂಡು ತಮ್ಮ ಆಟೋ ರಿಕ್ಷಾಗಳಿಗೆ ಅಳವಡಿಸುವಂತೆ ಠಾಣಾಧಿಕಾರಿಗೆ ಆದೇಶ ನೀಡಿದ್ದಾರೆ. ತಪ್ಪಿದ್ದಲ್ಲಿ ನೋಂದಣಿ ಮಾಡದ ಆಟೋ ಚಾಲಕರ ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.