ಕರಿಕೆ, ಜ. 12: ಕೊಡಗು ಜಿ.ಪಂ. ಅಧೀನದ ಐಟಿಡಿಪಿ ಇಲಾಖೆಯ ಸಮಗ್ರ ಗಿರಿಜ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿದ ಕಾಂಕ್ರಿಟ್ ರಸ್ತೆಯನ್ನು ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕರಿಕೆ ಚೆತ್ತುಕಾಯ ಶಾಸ್ತಾವು ದೇವಾಲಯದ ಮೂಲಕ ಪಚ್ಚೆಪಿಲಾವು ಗಿರಿಜನ ಕಾಲೋನಿ ಪಳ್ಳಿಕಳದ ಸಂಪರ್ಕ ರಸ್ತೆಯನ್ನು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.

ವೀರಾಜಪೇಟೆ ಶಾಸಕರ ವಿಶೇಷ ಪ್ರಯತ್ನದಿಂದ ಗ್ರಾಮಕ್ಕೆ ಮೂರುವರೆ ಕೋಟಿಗೂ ಅಧಿಕ ಅನುದಾನ ಈ ಬಾರಿ ಬಿಡುಗಡೆಯಾಗಿದ್ದು ಅದರಲ್ಲಿ ಈ ಕಾಂಕ್ರಿಟ್ ರಸ್ತೆ ಕೂಡ ಒಳಗೊಂಡಿದೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ನಾರಾಯಣ, ಭಾಜಪ ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್, ಯುವ ಮೋರ್ಚ ಅಧ್ಯಕ್ಷ ನಿಡ್ಯಮಲೆ ನಂದ, ಪ್ರಮುಖರಾದ ರತೀಶ ಹೊದ್ದೆಟ್ಟಿ, ಅರವಿಂದ, ರಾಘವ ಕಟ್ಟಕೋಡಿ, ರಮೇಶ್ ಸೇರಿದಂತೆ ಇತರೆ ಪ್ರಮುಖರು ಹಾಜರಿದ್ದರು.