ನಾಪೋಕ್ಲು, ಜ. 11: ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ 2019ರ ಹುತ್ತರಿ ಹಬ್ಬ ಒತ್ತೋರ್ಮೆ ಕೂಟವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಮುಂಡ್ಯೋಳಂಡ ಬಿ. ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷ ಮಾಚಂಡ ಎಸ್. ಮುದ್ದಯ್ಯ, ಚೇನಂಡ ಸುರೇಶ್ ನಾಣಯ್ಯ, ಚೆರುವಾಳಂಡ ನಾಣಯ್ಯ, ಹಾಗೂ ಬೊವ್ವೇರಿಯಂಡ ಲವಕುಮಾರ್ ಪಾಲ್ಗೊಂಡಿದ್ದರು. ಸಮಾಜದ ಕಟ್ಟಡ ನಿರ್ಮಾಣಕ್ಕೆ ಮೂಡೇರ ಮೊಣ್ಣಪ್ಪ ಭೂಮಿಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಕೋಕೇರಿ ಗ್ರಾಮ ಹಾಗೂ ಮರಂದೋಡ ಗ್ರಾಮಸ್ಥರು ಬೊಳಕಾಟ್, ಕೋಲಾಟ್, ಉಮ್ಮತ್ತಾಟ್, ಪ್ರದರ್ಶನ ನಡೆಯಿತು. ಕೊಡವ ಆಚಾರ, ವಿಚಾರ, ಭಾಷೆ, ಪರಂಪರೆಗಳನ್ನು ಉಳಿಸಿ-ಬೆಳೆಸಲು ಸರ್ವರೂ ಕಂಕಣಬದ್ದರಾಗಬೇಕು ಎಂದು ಅತಿಥಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಪಟ್ರಮಾಡ ಜಗದೀಶ್, ಐತಿಚಂಡ ಭೀಮಯ್ಯ, ಮದ್ದಂಡ ಸತೀಶ್, ಬೇಪಡಿಯಂಡ ಬಿದ್ದಪ್ಪ, ಮುಂಡ್ಯೋಳಂಡ ಮಿಟ್ಟು, ಅಪ್ಪಯ್ಯ, ಸಮಿತಿ ಸದಸ್ಯರಾದ ಚೆಯ್ಯಂಡ ಪುಟ್ಟಪೆಮ್ಮಯ್ಯ, ನೆರವಂಡ ಚಿಮ್ಮಿ ಚೆಂಗಪ್ಪ, ಮಾಚಂಡ ಪ್ರಭು, ಕುಮ್ಮಂಡ ಬಟ್ಟು, ಚೇನಂಡ ಜಪ್ಪು ದೇವಯ್ಯ, ಪಟ್ಟಚೆರವಂಡ ಜಿನ್ನು, ಬೊವ್ವೇರಿಯಂಡ ಸರ ಉಪಸ್ಥಿತರಿದ್ದರು.