ಸಿದ್ದಾಪುರ, ಜ. 11: ಕಾಡಾನೆ ದಾಳಿ ನಡೆಸಿ ಬೈಕನ್ನು ಜಖಂಗೊಳಿಸಿದ್ದು, ಅದೃಷ್ಟವಶಾತ್ ಅರಣ್ಯ ಸಿಬ್ಬಂದಿ ಪ್ರಾಣಾಪಾಂiÀi ದಿಂದ ಪಾರಾದ ಘಟನೆ ಪಾಲಿಬೆಟ್ಟ ಸಮೀಪದ ಅಬ್ಬೂರಿನಲ್ಲಿ ನಡೆದಿದೆ.ಅಬ್ಬೂರು ವ್ಯಾಪ್ತಿಯ ವನ್ಯಜೀವಿ ಮೀಸಲು ಅರಣ್ಯದ ಸಮೀಪದಲ್ಲೇ ಟಾಟಾ ಸಂಸ್ಥೆಯ ಕಾಫಿ ತೋಟ ಇದ್ದು, ಬೆಳಗ್ಗಿನ ಜಾವ ಕಾಡಾನೆ ಯೊಂದು ಕಾಫಿ ತೋಟದಿಂದ ಅರಣ್ಯಕ್ಕೆ ತೆರಳುತಿತ್ತು ಎನ್ನಲಾಗಿದೆ. ಕಾಡಾನೆ ತೆರಳುವ ಜಾಗದಲ್ಲೇ ಅರಣ್ಯ ಇಲಾಖೆಯ ಕ್ಯಾಂಪ್ ಇದ್ದು, ಶಿವು ಸೇರಿದಂತೆ ಇತರೆ ಸಿಬ್ಬಂದಿ ಕ್ಯಾಂಪ್‍ನಲ್ಲಿದ್ದು, ಕ್ಯಾಂಪ್‍ನ ಮುಂಬಾಗದಲ್ಲೇ ಬೈಕನ್ನು ನಿಲ್ಲಿಸಲಾಗಿತ್ತು. ಈ ಸಂದರ್ಭ ಸಿಬ್ಬಂದಿಗಳನ್ನು ಕಂಡ ಕಾಡಾನೆಯು ರೋಷಗೊಂಡು ಏಕಾಏಕಿ ದಾಳಿಗೆ ಮುಂದಾಗಿದೆ. (ಮೊದಲ ಪುಟದಿಂದ) ಸಿಬ್ಬಂದಿ ಅಲ್ಲಿಂದ ಓಡಿದ್ದು, ಕಾಡಾನೆಯು ರಸ್ತೆಯ ಮೂಲಕ ಬಂದು ಬೈಕ್ ಮೇಲೆ ದಾಳಿ ನಡೆಸಿದೆ. ಬೈಕ್ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭ ಸಿಬ್ಬಂದಿಗಳು ಕಿರುಚಿದ್ದು, ಕಾಡಾನೆಯು ಅರಣ್ಯದತ್ತ ಓಡಿದೆ. ದಾಳಿಯಿಂದಾಗಿ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಅಬ್ಬೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾರ್ಮಿಕರು ಭಯಭೀತರಾಗಿದ್ದಾರೆ.

-ವಾಸು