ಮಡಿಕೇರಿ, ಜ. 11: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಹತೆಗಳು: ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3 ಬಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ), ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ರೂ. 3 ಲಕ್ಷ, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು. ಅರ್ಜಿದಾರರ ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಾಲ ಯೋಜನೆಗಳು: ಅವಧಿಸಾಲ ಯೋಜನೆಗಳು: ಕೃಷಿ ಮತ್ತು ಕೃಷಿ ಅವಲಂಭಿತ ಚಟುವಟಿಕೆಗಳಿಗೆ, ಸಣ್ಣ ವ್ಯಾಪಾರ/ಸಾಂಪ್ರದಾಯಿಕ ವೃತ್ತಿದಾರರು ಮತ್ತು ಕುಶಲಕರ್ಮಿಗಳಿಗೆ, ಸೇವಾ ವಲಯ, ಸಾರಿಗೆ ವಲಯದಲ್ಲಿ (ಆಟೋರಿಕ್ಷ/ಗೂಡ್ಸ್ ಆಟೋರಿಕ್ಷ) ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಉದ್ಯಮ/ಕೋರ್ಸ್‍ಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ ರೂ.15.00ಲಕ್ಷ ಗಳವರೆಗೆ ವಾರ್ಷಿಕ ಶೇ. 6 ರಿಂದ 8 ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ: ಂIಅಖಿಇ, ಒeಜiಛಿಚಿಟ ಅouಟಿಛಿiಟ oಜಿ Iಟಿಜiಚಿ, Uಉಅ ಮುಂತಾದ ನೋಂದಾಯಿತ ಏಜೆನ್ಸಿಗಳು ಮತ್ತು ಅನುಮೋದಿತ ಹೊಂದಿದ ವೃತ್ತಿಪರ ತಾಂತ್ರಿಕ ಕೋರ್ಸ್‍ಗಳಲ್ಲಿ ಅರ್ಹತ ಪರೀಕ್ಷೆಯಲ್ಲಿ ಶೇ. 50 ರಷ್ಟು ಅಂಕ ಪಡೆದು ಪ್ರವೇಶ ಹೊಂದಿದ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 15 ಲಕ್ಷ ಅಥವಾ ಕೋರ್ಸ್‍ನ ಅವಧಿಗೆ ಒಟ್ಟು ರೂ. 15 ಲಕ್ಷ ಸಾಲ ಮಂಜೂರು. ಶೇ. 4 ರ ಬಡ್ಡಿ ದರ. ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ರೂ. 20 ಲಕ್ಷ ಸಾಲ ಶೇ. 4ರ ಬಡ್ಡಿದರ ಹಾಗೂ ವಿದ್ಯಾರ್ಥಿನಿಯರಿಗೆ ಶೇ. 3.5ರ ಬಡ್ಡಿದರ.

ನ್ಯೂ ಸ್ವರ್ಣಿಮಾ ಯೋಜನೆ: ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.2,00,000/-ಗಳ ಸಾಲ ಶೇ. 5ರ ಬಡ್ಡಿ ದರ.

ಮೈಕ್ರೋ ಫೈನಾನ್ಸ್ ಸಾಲ ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.1,00,000/-ಗಳ ಸಾಲ ಶೇ. 5ರ ಬಡ್ಡಿ ದರ.

ಮಹಿಳಾ ಸಮೃದ್ಧಿ ಯೋಜನೆ: ಗರಿಷ್ಠ 20 ಸದಸ್ಯರನ್ನೊಳಗೊಂಡ ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.35,000/-ಗಳ ಸಾಲ ಶೇ. 4ರ ಬಡ್ಡಿ ದರ.

ಚಿಕ್ಕ ಸಾಲ ಯೋಜನೆ: ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಣ್ಣ ವ್ಯಾಪಾರ ಕೈಗೊಳ್ಳಲು ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ. 1,00,000/-ಗಳ ಸಾಲ ಶೇ.6ರ ಬಡ್ಡಿ ದರ.

ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು ಉಚಿತ ಅರ್ಜಿಗಳನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ತಾ. 14 ರಿಂದ 22 ರೊಳಗೆ ಪಡೆದುಕೊಳ್ಳುವುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ತಾ. 31 ರೊಳಗೆ ಸಲ್ಲಿಸುವುದು. ತಾ. 31 ರ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ: 08272-221656 ಮುಖಾಂತರ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.