ಮಡಿಕೇರಿ, ಜ. 11: ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಇಂದು ಚಿಕ್ಕಮಂಡೂರು ಅಪ್ಪಚ್ಚಕವಿ ವಿದ್ಯಾಲಯ ಕ್ಯಾಂಪಸ್‍ನಲ್ಲಿ ಜಿಲ್ಲಾಮಟ್ಟದ ಬಾಕ್ಸಿಂಗ್ ಟೂರ್ನಮೆಂಟ್‍ಗೆ ಚಾಲನೆ ನೀಡಲಾಯಿತು.
ಎಂ.ಇ.ಜಿ. ತಂಡವು ಪ್ರದರ್ಶನ ಪಂದ್ಯಾಟ ನೀಡಿದ್ದು, ನೆರೆದವರ ಮೈನವಿರೇಳಿಸಿತು. ಈ ಬಾರಿ ಸಾಯಿಶಂಕರ ವಿದ್ಯಾಲಯದಲ್ಲಿ ಅಭ್ಯಸಿಸುತ್ತಿರುವ ಸಂತ್ರಸ್ತ ವಿದ್ಯಾರ್ಥಿಗಳು ಬಾಕ್ಸಿಂಗ್‍ನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಹದಿನಾಲ್ಕು ವರುಷದಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ಹೆಣ್ಣುಮಕ್ಕಳೂ ಬಾಕ್ಸಿಂಗ್‍ನಲ್ಲಿ ತೊಡಗಿರುವುದು ವಿಶೇಷ ಆಕರ್ಷಣೆ.
ನಾಳೆ ಅಂತಿಮ ಸ್ಪರ್ಧೆ ಹಾಗೂ ಬಹುಮಾನ ವಿತರಿಸಲಾಗುವುದು ಎಂದು ಅಸೋಸಿಯೇಷನ್ ಕಾರ್ಯದರ್ಶಿ ಕ|| ಮುತ್ತಣ್ಣ ಹೇಳಿದರು. ಅಧ್ಯಕ್ಷ ಕ|| ಐಯ್ಯಪ್ಪ ಹಾಜರಿದ್ದರು.