ಚೆಟ್ಟಳ್ಳಿ, ಜ. 11: ಸಮೀಪದ ಪೊನ್ನತ್ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ತಾ.12ರಂದು (ಇಂದು) ಸಂಜೆ 7 ಗಂಟೆಗೆ ಮಜ್ಲಿಸುನ್ನೂರ್ ಹಾಗೂ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಪೊನ್ನತ್ಮೊಟ್ಟೆ ಮಹಲ್ ಪ್ರಮುಖರು ತಿಳಿಸಿದ್ದಾರೆ.

ಮಜ್ಲಿಸುನ್ನೂರ್ ಹಾಗೂ ದುಆ ನೇತೃತ್ವವನ್ನು ಪಾಣಕ್ಕಾಡ್ ಸಯ್ಯದ್ ನೌಫಲ್ ಅಲಿ ಶಿಬಾಹ್ ತಂಙಲ್ ವಹಿಸಲಿದ್ದು, ಪ್ರಭಾಷಣವನ್ನು ಎನ್.ಎನ್. ಇಕ್ಬಾಲ್ ಮೌಲವಿ ನೆಲ್ಲಿಹುದಿಕೇರಿ ಮಾಡಲಿದ್ದಾರೆ. ಮಹಲ್ ಕಾರ್ಯದರ್ಶಿ ವಿ.ಪಿ ಮೊಯಿದೀನ್, ಅಧ್ಯಕ್ಷ ಮುಸ್ತಫಾ ಅಝ್ಹರಿ, ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಸಂದೇಶ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಲ್ ಉಪಾಧ್ಯಕ್ಷ ಕುಟ್ಟಿ ಹಸ್ಸನ್ ವಹಿಸಲಿದ್ದಾರೆ.

ಮಹಲ್ ಖತೀಬ ಶಾದುಲಿ ಸಖಾಫಿ, ಮಹಲ್ ಕಾರ್ಯದರ್ಶಿ ಉನೈಸ್ ಫೈಝಿ, ಸದರ್ ಮುಹಲ್ಲಿಮ್ ಸಹದ್ ಫೈಝಿ, ಜಲಾಲ್ ಮೌಲವಿ, ಮೈದೂ ಸಖಾಫಿ, ಹಸ್ಸನ್ ಕುಟ್ಟಿ ಹಾಜಿ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆಂದು ಮಹಲ್ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.