ಕೂಡಿಗೆ, ಜ. 10: ಕೂಡುಮಂಗಳೂರು ಮಹಿಳಾ ಮೋರ್ಚಾದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅರಿವು ಮೂಡಿಸುವ ಕಾರ್ಯಕ್ರಮ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವನತ್ತೂರು ವಾರ್ಡ್‍ನಲ್ಲಿ ನಡೆಯಿತು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿದರು.

ಈ ಸಂದರ್ಭ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಾವಿತ್ರಿರಾಜ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ಬಸವನತ್ತೂರು ಭೂತ್ ಅಧ್ಯಕ್ಷ ಕೃಷ್ಣ, ಮಹಿಳಾ ಘಟಕದ ಪ್ರಮುಖರಾದ ಕನಕ, ಪಿ. ಪವಿತ್ರ, ಸವಿತ, ಸುಶೀಲಾ, ಸಾವಿತ್ರಿ, ನೂತನ್, ಟಿ.ಎನ್. ರಾಜು ಮೊದಲಾದವರು ಇದ್ದರು.