ಮಡಿಕೇರಿ, ಜ. 10: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ, ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ, ನೌಕರರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರಿಗೆ ಶಿಕ್ಷಣ ಕಾರ್ಯಕ್ರಮವು ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ, ಪತ್ತಿನ ಸಹಕಾರ ಸಂಘಗಳಿಗೆ ಶಿಕ್ಷಣ ಅರಿವು ಕಾರ್ಯಕ್ರಮ ಏರ್ಪಡಿಸಿದ್ದು, ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ನೀಡುವ ಮಾಹಿತಿಯನ್ನು ಪಡೆದು ಇತರರಿಗೂ ತಿಳಿಸಬೇಕು ಎಂದರು.
ದೇಶದ ಅಭಿವೃದ್ಧಿ, ಏಳಿಗೆಗೆ ಆದಾಯ ತೆರಿಗೆ, ಜಿಎಸ್ಟಿಗಳಂತಹ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಸಮಾಜ, ಮತ್ತು ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯ. ಇದರಿಂದ ಸಂಪೂರ್ಣ ಮಾಹಿತಿ ಪಡೆದು ಅದನ್ನು ಸಂಘದ ಸದಸ್ಯರಿಗೂ ಮಾಹಿತಿ ನೀಡಿ ಎಂದು ಹೇಳಿದರು.
ಆದಾಯ ತೆರಿಗೆ, ಜಿಎಸ್ಟಿಗಳ ಸಾಧಕ ಭಾದಕಗಳನ್ನು ಸರಿಪಡಿಸುವ ಕಾರ್ಯ ನಡೆಯಬೇಕಿದೆ. ಇದರಿಂದ ಬಹಳಷ್ಟು ವಿಚಾರಗಳನ್ನು ತಿಳಿಯಬೇಕು ಎಂದರು. ಮೈಸೂರಿನ ಚಾಟರ್ಡ್ ಅಕೌಟೆಂಟ್ ವಿ.ಎ. ಯತೀಶ್ ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ ಸಹಕಾರ ಸಂಘ, ನೌಕರರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರಿಗೆ ಶಿಕ್ಷಣ ಕಾರ್ಯಕ್ರಮದಡಿ ಆದಾಯ ತೆರಿಗೆ ಮತ್ತು ಜಿಎಸ್ಟಿ ಕುರಿತು ಉಪನ್ಯಾಸ ನೀಡಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ಇತರೆ ಸಂಘಗಳಲ್ಲಿರುವ ನಾಮಿನಲ್ ಸದಸ್ಯರ ಬಳಿ ವ್ಯವಹಾರ ಮಾಡುವುದರಿಂದ ಆದಾಯ ತೆರಿಗೆ ಪಾವತಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಆದಾಯ ತೆರಿಗೆ ಕಾಯ್ದೆಯಲ್ಲಿ 292 ಕಲಂಗಳು ಇದ್ದು, 80 (1) ಮತ್ತು (2)ರಲ್ಲಿ ಸಹಕಾರ ಸಂಘಗಳಿಗೆ ಅನ್ವಯವಾಗುವಂತೆ ತೆರಿಗೆ ಕಡತ ಕುರಿತಂತೆ ಮಾಹಿತಿ ಇದೆ. ಸಹಕಾರಿ ಕ್ಷೇತ್ರಕ್ಕೆ ಆದಾಯವಿದ್ದಲ್ಲಿ ತೆರಿಗೆ ಪಾವತಿಸಬೇಕು. ನಷ್ಟವಿದ್ದರೂ ಆದಾಯ ತೆರಿಗೆಯ ಕಡತ ನಿರ್ವಹಣೆ ಮಾಡಬೇಕು ಮತ್ತು ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ಕಡತ ಮಾಡಬೇಕು ಎಂದರು.
ವೈಯಕ್ತಿಕ ಪಾವತಿಗೆ ಜುಲೈ 31 ಹಾಗೂ ಸಂಘಗಳಿಗೆ ಸೆಪ್ಟೆಬಂರ್ 31 ರೊಳಗೆ ಆದಾಯ ತೆರಿಗೆ ಪಾವತಿಸಬೇಕು. ಅವಧಿ ಮೀರಿದರೆ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಡತ ಆಗದಿದ್ದಲ್ಲಿ 7 ವರ್ಷಗಳ ಹಿಂದಿನ ವ್ಯವಹಾರ ಅವಲೋಕಿಸಲಾಗುವುದು. ಸಮಯ ಅವಕಾಶ ಮೀರಿದ್ದಲ್ಲಿ ನಿಗದಿತ ದಿನಾಂಕದೊಳಗಿದ್ದರೆ ವಿನಾಯಿತಿ ಮಾಡಬಹುದು. ವಿನಾಯಿತಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮತ್ತು ಪಿ.ಎಲ್.ಡಿ. (ಕೃಷಿ ಮತ್ತು ಗ್ರಾಮೀಣಾಭಿವೃದಿ)್ಧ ಬ್ಯಾಂಕುಗಳಿಗೆ ಮಾತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಂಜುಳ ಅವರು ಪ್ರಾರ್ಥಿಸಿದರು. ಯೋಗೆಂದ್ರ ನಾಯಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.