ಮಡಿಕೇರಿ, ಜ. 9: ಇ-ಕೆವೈಸಿ ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ (ಎಎವೈ) ಆದ್ಯತಾ ಪಡಿತರ ಚೀಟಿ ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ ಎಪಿಎಲ್ ಸೇರ್ಪಡೆಗೊಂಡಿರುವ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚನ್ನು ನೀಡಿ ಇ-ಕೆವೈಸಿಯನ್ನು ಮಾಡಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕೋರಿದೆ.
ಪಡಿತರ ಚೀಟಿ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಮಾರ್ಚ್ 31 ರ ಒಳಗಾಗಿ ಕುಟುಂಬದ ಸದಸ್ಯರುಗಳು ಪ್ರತ್ಯೇಕವಾಗಿ ತೆರಳಿ ಇ-ಕೆವೈಸಿ ಮಾಡಿಸಬಹುದು. ನ್ಯಾಯಬೆಲೆ ಅಂಗಡಿಗಳಲ್ಲಿ ಮಾರ್ಚ್ 31 ರವರೆಗೆ ಇ-ಕೆವೈಸಿ ಸಂಗ್ರಹಿಸಲಾಗುವುದು. ಈ ರೀತಿ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹಣ ತೆಗೆದುಕೊಂಡಲ್ಲಿ ತಾಲೂಕು ಆಹಾರ ಕಚೇರಿ /ಉಪ ನಿರ್ದೇಶಕರ ಕಚೇರಿಗೆ ದೂರು ನೀಡಬಹುದು.
ಎಎವೈ, ಆದ್ಯತಾ, ಆದ್ಯತೇತರ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಸದಸ್ಯರು ಈ ರೀತಿ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸುವುದು. ತಪ್ಪಿದಲ್ಲಿ ಇ-ಕೆವೈಸಿ ಮಾಡಿಸದ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಪಡಿತರ ಹಂಚಿಕೆ ಲಭ್ಯವಾಗುವುದಿಲ್ಲ. ಇ-ಕೆವೈಸಿ ಕಾರ್ಯವನ್ನು ಕೇವಲ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಮಾಡತಕ್ಕದ್ದು. ಬಯೋ ಸೇವಾ ಕೇಂದ್ರಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಅಥವಾ ಇನ್ಯಾವುದೇ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಇ-ಕೆವೈಸಿ ಕಾರ್ಯವನ್ನು ಮಾಡುವಂತಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲಾ ವರ್ಗದ ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚನ್ನು ನೀಡಿ ಇ-ಕೆವೈಸಿ ಕಾರ್ಯಕ್ರಮವನ್ನು ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಕೋರಿದ್ದಾರೆ.