ಮಡಿಕೇರಿ, ಜ. 9: ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.ಕಳೆದ ತಾ. 12.10.2018 ರಂದು ರಾತ್ರಿ ವೇಳೆ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಹಿಂಭಾಗದಲ್ಲಿ ಸಿಗರೇಟಿಗೆ ಗಾಂಜಾ ತುಂಬಿಸಿ ಸೇವನೆ ಮಾಡುತ್ತಿದ್ದ ತೇಜಸ್ ತಿಮ್ಮಯ್ಯ ಹಾಗೂ ಬೋಪಣ್ಣ ಎಂಬವರುಗಳನ್ನು ನಗರ ಠಾಣಾಧಿಕಾರಿಯಾಗಿದ್ದ ಷಣ್ಮುಗಂ ಅವರು ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ. ಮನು ಅವರು ಇಂದು ತೀರ್ಪು ನೀಡಿದ್ದು, ಆರೋಪಿಗಳಿಬ್ಬರಿಗೆ ತಲಾ ರೂ. 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ವಾದ ಮಂಡಿಸಿದ್ದರು.