ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ವಾಹನಗಳನ್ನು ತೆಗೆದು ಸರ್ಕಾರದ ನಿಯಮಗಳನ್ನು ಉಲ್ಲಂಘಿಸದೇ ಅವಶ್ಯವಿರುವ ಇನ್ಸೂರೆನ್ಸ್, ರೋಡ್ ಟ್ಯಾಕ್ಸ್ ಹಾಗೂ ಇನ್ನಿತರ ತೆರಿಗೆಗಳನ್ನು ಕಟ್ಟುವ ಮೂಲಕ ಸರ್ಕಾರಕ್ಕೆ ಆದಾಯ ನೀಡುತ್ತಿದ್ದೇವೆ. ಇದನ್ನೇ ನಂಬಿ ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದೇವೆ. ಇದೀಗ ಪ್ರತಿನಿತ್ಯ ತೊಂದರೆ ಅನುಭವಿಸಿ ಸಂಸಾರ ನಡೆಸಲಾರದ ಪರಿಸ್ಥಿತಿಗೆ ಬಂದಿದೆ. ಗಡಿ ಭಾಗದಿಂದ ರಾಜಾರೋಷವಾಗಿ ಜಿಲ್ಲೆಯ ಒಳಗೆ ಪ್ರವೇಶಿಸುವ ಕೇರಳ ರಾಜ್ಯದ ಟ್ಯಾಕ್ಸಿಗಳು ಈ ರಾಜ್ಯದ ಆರ್‍ಟಿಓ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕು.

ರಫೀಕ್ ಎಂ.ಎ., ರಕ್ಷಾಣಾಧಿಕಾರಿ,

ಕರ್ನಾಟಕ ಟ್ಯಾಕ್ಸಿ ಆರ್ಗನೈಜೇಷನ್ಸ್, ಕೊಡಗು ವಿಭಾಗ

ಕರ್ನಾಟಕ ರಾಜ್ಯದ ನಿಯಮಗಳನ್ನು ಗಾಳಿಗೆ ತೂರಿ ಗಡಿಭಾಗದಿಂದ ಆಗಮಿಸುತ್ತಿರುವ ಕೇರಳ ರಾಜ್ಯದ ಟ್ಯಾಕ್ಸಿಗಳು ಕೊಡಗು ಜಿಲ್ಲೆಯಲ್ಲಿ ನಿರಾತಂಕವಾಗಿ ಸಂಚರಿಸುತ್ತಿವೆ. ಯಾವುದೇ ರೀತಿಯ ತೆರಿಗೆಗಳನ್ನು ಕಟ್ಟದೆ ವ್ಯಾಪಾರ ನಡೆಸಲಾಗುತ್ತಿದೆ ಕೊಡಗಿನ ಟ್ಯಾಕ್ಸಿಗಳು ಕೇರಳ ಪ್ರವೇಶ ಮಾಡುವಾಗ ಕಡ್ಡಾಯವಾಗಿ ಆ ರಾಜ್ಯದ ನಿಯಮದಂತೆ ಟ್ಯಾಕ್ಸ್‍ಗಳನ್ನು ಕಟ್ಟಲೇಬೇಕು. ಕೇರಳ ರಾಜ್ಯ ಪ್ರವೇಶಿಸುವ ಸಂದರ್ಭ ಅಲ್ಲಿ ಗೇಟ್‍ಗಳನ್ನು ಅಳವಡಿಸಲಾಗಿದೆ. ಇಲ್ಲಿಯ ಅಧಿಕಾರಿಗಳು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಆ ರಾಜ್ಯಕ್ಕೆ ಪ್ರವೇಶ ಸಿಗಲಿದೆ. ಆದರೆ ಕೊಡಗಿನ ಗಡಿ ಭಾಗದಲ್ಲಿ ಗೇಟ್‍ಗಳು ಇಲ್ಲದಿರುವುದರಿಂದ ಇದರ ಅನುಕೂಲವನ್ನು ಹೆಚ್ಚಾಗಿ ಕೇರಳ ರಾಜ್ಯದ ಟ್ಯಾಕ್ಸಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಬೀಳದಿದ್ದಲ್ಲಿ ಜಿಲ್ಲೆಯ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಪರಶುರಾಮ್ ಕೆ.ಎಂ., ಉಪಾಧ್ಯಕ್ಷ

ಕರ್ನಾಟಕ ಟ್ಯಾಕ್ಸಿ ಆರ್ಗನೈಜೇಷನ್ಸ್, ಕೊಡಗು ವಿಭಾಗ

ಮುಂಜಾನೆಯಿಂದ ಸಂಜೆಯವರೆಗೂ, ಟ್ಯಾಕ್ಸಿ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಎದುರು ನೋಡುತ್ತಿರುವ ಮಾಲೀಕರು,ಚಾಲಕರ ಪರಿಸ್ಥಿತಿ ಕಷ್ಟದಲ್ಲಿದೆ. ನಿಯಮದಂತೆ ಎಲ್ಲಾ ವಿಧದÀ ತೆರಿಗೆಗಳನ್ನು ಕಟ್ಟುತ್ತ್ತಾ ಜೀವನ ಸಾಗಿಸಲು ಈ ವೃತ್ತಿ ನಡೆಸುತ್ತಿದ್ದಾರೆ. ಆದರೆ ಇಲ್ಲಿಯ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಕೇರಳ ರಾಜ್ಯದಿಂದ ಬರುವ ಟ್ಯಾಕ್ಸಿಗಳಿಗೆ ಕಡಿವಾಣ ಬೀಳಬೇಕು.

ಸಿ.ಕೆ. ಬೋಪಣ್ಣ, ಅಧ್ಯಕ್ಷರು, ವಾಹನ ಚಾಲಕರ ಸಂಘ, ಗೋಣಿಕೊಪ್ಪ