ಮಡಿಕೇರಿ, ಜ. 9: ರೋಟರಿ ಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸಿದ್ದ ಮಂಗಳೂರಿನ ಸೂರ್ಯಪ್ರಕಾಶ್ ಭಟ್ (62) ನಿನ್ನೆ ದಿನ ನಿಧನರಾದರು.
ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ಆರಂಭಕ್ಕೂ ಕಾರಣರಾಗಿದ್ದ ಅವರು ನಾಯಕತ್ವದ ಕುರಿತು ತೆರಿಗೆ ಕುರಿತು, ರೋಟರಿ ಕುರಿತು ಅತ್ಯುತ್ತಮವಾಗಿ ಮಾತನಾಡುತ್ತಿದ್ದರು. ತೆರಿಗೆ ಸಲಹೆಗಾರರಾಗಿದ್ದ ಅವರು ರೋಟರಿಯಲ್ಲಿ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಗೌರವಾರ್ಥ ಇಂದು ರೋಟರಿ ಮಿಸ್ಟಿಹಿಲ್ಸ್ ಶ್ರದ್ಧಾಂಜಲಿ ಸಭೆ ನಡೆಸಿತು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.