ಕುಶಾಲನಗರ, ಜ. 9: ಮೀನುಕೊಲ್ಲಿ ಕಾಲೋನಿ ನಿವಾಸಿ ಬೋಜಣ್ಣ (24) ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಗ್ರಾಮದ ನಡುಮನೆ ಚಂಗಪ್ಪ ಎಂಬವರ ತೋಟದಲ್ಲಿ ಮರ ಕಸಿ ಕಾರ್ಯ ಮಾಡಿ ಇಳಿಯುತ್ತಿದ್ದ ಸಂದರ್ಭ ಕೆಳಗೆ ಬಿದ್ದ ಬೋಜಣ್ಣ ಮೃತಪಟ್ಟಿದ್ದಾರೆ. ಭೋಜ ಅವಿವಾಹಿತನಾಗಿದ್ದು; ಆಯತಪ್ಪಿ ಬಿದ್ದಿರುವುದಾಗಿ ತಿಳಿದುಬಂದಿದೆ.