ವೀರಾಜಪೇಟೆ ಬಳಿಯ ಪೆರಂಬಾಡಿ ನಿವಾಸಿ ಬಿ.ಜಿ. ಪ್ರಭಾಕರ ಭಟ್ (75) ಅವರು ತಾ. 7 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಟಕಕ್ಕಬ್ಬೆ ನಿವಾಸಿ; ಕೋಡಿಮನಿಯಂಡ ಸುಬ್ರಮಣಿ ಅವರ ಪತ್ನಿ ದೇವಕಿ (76) ಅವರು ತಾ. 9 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 10 ರಂದು (ಇಂದು) ಮೃತರ ಸ್ವಗೃಹದಲ್ಲಿ ನಡೆಯಲಿದೆ.

ಟವೀರಾಜಪೇಟೆ ಕ್ಲಾಕ್ ಟವರ್ ಸಮೀಪದ ಬಾದ್‍ಶಾ ಮಸೀದಿಯಲ್ಲಿ ದೀರ್ಘಕಾಲ ಮುಅದ್ದಿನ್ ಆಗಿ ಸೇವೆ ಸಲ್ಲಿಸಿದ್ದ ಮೊಗರಗಲ್ಲಿ ನಿವಾಸಿ; ನೂರುಲ್ಲಾಖಾನ್ ಸಾಬ್ (77) ತಾ. 8 ರಂದು ನಿಧನ ಹೊಂದಿದ್ದರು. ಮೃತರು ಪತ್ನಿ, ಈರ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಟಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ದಿ. ಶಿವಮೂರ್ತಿ ಅವರ ಪುತ್ರ ರುದ್ರಪ್ರಸಾದ್(55) ತಾ. 8ರಂದು ನಿಧನರಾದರು. ಇವರು ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ರುದ್ರಭೂಮಿಯಲ್ಲಿ ನಡೆಯಿತು.