ಸುಂಟಿಕೊಪ್ಪ,ಜ.9: ಇಲ್ಲಿನ ರಾಷ್ಟ್ರೀಯ ಹೆÀದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಯುವಕನ ಕಾಲಿಗೆ ತೀರ್ವ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

ರಾಷ್ಟ್ರೀಯ ಹೆÀದ್ದಾರಿಯ ಪೊಲೀಸ್ ಠಾಣೆ ಸಮೀಪ ಆಲ್ಟೋ ಕಾರು ಮತ್ತು ಪಲ್ಸ್ಸರ್ ಬೈಕು ನಡುವೆ ಡಿಕ್ಕಿಯಾದ ಪರಿಣಾಮ ಎಮ್ಮೆಗುಂಡಿ ನಿವಾಸಿ ಸಂಜೀವ ಅವರ ಪುತ್ರ ಹರೀಶ ಎಂಬಾತನ ಕಾಲಿಗೆ ತೀವ್ರ ಗಾಯಗೊಂಡ ಪರಿಣಾಮ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.