ಮಡಿಕೇರಿ, ಜ. 8: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆ ಉದ್ದೇಶದಿಂದ ಆರಂಭವಾಗಿರುವ ಕೊಡಗು ವಿಕಸನ ಸಂಸ್ಥೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು.
ಬೆಂಗಳೂರಿನ ರಾಜಾಜಿನಗರದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಲಾಂಛನ ಬಿಡುಗಡೆ ಮಾಡಿದರು. ತಮ್ಮ ಕ್ಷೇತ್ರದಲ್ಲಿ ಕೂಡಾ ವಿಕಸನ ಸಂಸ್ಥೆ ಹಲವು ವರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕೊಡುಗೆ ನೀಡುತ್ತಿದೆ. ಅದರಲ್ಲೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ವಿಕಸನಕ್ಕೆ ವಿಶೇಷವಾಗಿ ನೆರವಾಗುತ್ತಿದೆ.
ಈ ಕಾರ್ಯದಲ್ಲಿ ಉತ್ತಮ ಯಶಸ್ಸನ್ನೂ ಕಾಣುತ್ತಿದ್ದೇವೆ. ಅದೇ ಸದುದ್ದೇಶದಿಂದ ಕೊಡಗಿನಲ್ಲಿ ಸಂಸ್ಥೆ ಹುಟ್ಟು ಹಾಕಿರುವುದು ಸ್ವಾಗತಾರ್ಹ ನಡೆ ಎಂದರು.
ಮಡಿಕೇರಿಯ ರೋಹಿತ್ ಕಲ್ಲೇಗ ಲಾಂಛನ ವಿನ್ಯಾಸ ಮಾಡಿದ್ದಾರೆ. ಬಿಡುಗಡೆ ಸಂದರ್ಭ ಕೊಡಗು ವಿಕಸನ ಬಳಗದ ಚೈಯ್ಯಂಡ ಸತ್ಯ ಗಣಪತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿಶೋರ್ ರೈ ಕತ್ತಲೆಕಾಡು, ಶೇಖರ್, ರಾಜಾಜಿನಗರ ವಿಕಸನ ಪದಾಧಿಕಾರಿ ಗಳಾದ ಯುವ ಮೋರ್ಚಾ ಲಿಂಗ ರಾಜು, ಸುನೀಲ್ ಶಿವಾನಂದ ಇದ್ದರು.