ಮಡಿಕೇರಿ: ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ನ ಬೈರಂಬಾಡ ಸರಕಾರಿ ಪ್ರಾಥಮಿಕ ಶಾಲೆಗೆ ಅಮ್ಮತ್ತಿಯ ಡಾ. ಶುಭ ಹಾಗೂ ಡಾ. ಚಂದ್ರು ಅವರು ನಲಿಕಲಿ ಕೊಠಡಿಗೆ ಅಗತ್ಯವಾದ ಮೇಜು ಹಾಗೂ ಕುರ್ಚಿಗಳನ್ನು ಕೊಡಗೆಯಾಗಿ ನೀಡಿದರು.
ಈ ಸಂದರ್ಭ ದಾನಿಗಳು, ಕ್ಲಸ್ಟರ್ನ ಸಿ.ಆರ್.ಪಿ. ಸುಷ್ಮಾ, ಮುಖ್ಯ ಶಿಕ್ಷಕಿ ಹೆಚ್.ಎನ್. ಪದ್ಮ, ಸಹಶಿಕ್ಷಕ ಜೆ. ಹರೀಶ್ ಹಾಜರಿದ್ದರು.ಸೋಮವಾರಪೇಟೆ: ಇಲ್ಲಿಗೆ ಸಮೀಪದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ "ಮತದಾರರ ಮಿಂಚಿನ ನೋಂದಣಿ" ಕಾರ್ಯಕ್ರಮ ನಡೆಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ಚುನಾವಣೆ ಪ್ರತಿಯೊಬ್ಬ ಭಾರತೀಯರ ಹಕ್ಕು. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.
ಇದೇ ಸಂದರ್ಭ 18 ವರ್ಷ ತುಂಬಿದ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನಿಗದಿತ ನಮೂನೆಗಳನ್ನು ವಿತರಿಸಲಾಯಿತು.
ಈ ಸಂದರ್ಭ ಚುನಾವಣಾ ಸಾಕ್ಷರತಾ ಕ್ಲಬ್ನ ಸಂಚಾಲಕರಾದ ಪ್ರೊ. ಕೆ.ಹೆಚ್.ಧನಲಕ್ಷ್ಮಿ, ರೆಡ್ ರಿಬ್ಬನ್ ಕ್ಲಬ್ನ ಸಂಚಾಲಕರಾದ ಎಂ.ಎಸ್. ಶಿವಮೂರ್ತಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹೆಚ್.ಎನ್.ರಾಜು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಎಂ. ಪ್ರವೀಣ್ಕುಮಾರ್ ಸೇರಿದಂತೆ ಉಪನ್ಯಾಸಕರು ಪಾಲ್ಗೊಂಡಿದ್ದರು.ಪೊನ್ನಂಪೇಟೆ: ಇಲ್ಲಿಗೆ ಸಮೀಪದ ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಎನ್ ಮೀನಾಕ್ಷಿ ಅವರು ಡಿ. 31 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು ಇವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಇವರು 1998ರಲ್ಲಿ ನಲ್ಲೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಅಲ್ಲಿ 6 ವರ್ಷ ಸೇವೆ ಸಲ್ಲಿಸಿ ನಂತರ ಕಿರುಗೂರು ಶಾಲೆಗೆ 2005ರಲ್ಲಿ ವರ್ಗಾವಣೆಯಾಗಿದ್ದರು. ಬೀಳ್ಕೊಡುಗೆಯ ಸಂದರ್ಭ ಮುಖ್ಯ ಶಿಕ್ಷಕಿ ಸಿ. ರಾಜಮ್ಮ, ಸಹ ಶಿಕ್ಷಕಿಯರಾದ ಸಿ.ಕೆ. ಲಲಿತ, ಎಂ.ಎ. ಶ್ರೀಜಾ, ವೀಣಾ, ಗ್ರಾ.ಪಂ. ಸದಸ್ಯ ಆಲೇಮಾಡ ಸುಧೀರ್, ಸಿ.ಆರ್.ಪಿ. ತಿರುನೆಲ್ಲಿಮಡ ಜೀವನ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಎಂ.ಜಿ. ಮೀನ, ಗ್ರಾಮಸ್ಥರಾದ ಪ್ರತಿಮ, ಚೋಂದಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.