ಮಡಿಕೇರಿ, ಜ. 8: ಸಂಪ್ರದಾಯ ದಂತೆ ಕೇರಳದ ಬೈತೂರಪ್ಪ ದೇವಾಲಯ ಸನ್ನಿಧಿಯ ಶ್ರೀ ಕೋಮರತಚ್ಚ ದೈವ ಪಾತ್ರಿ ಹಾಗೂ ದೇವಳದ ತಕ್ಕ ಮುಖ್ಯಸ್ಥರು ಇಂದು ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಮತ್ತು ಜಿಲ್ಲಾ ಆಡಳಿತ ಭವನಕ್ಕೆ ಸಂದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.ಮಡಿಕೇರಿ, ಜ. 8: ಸಂಪ್ರದಾಯ ದಂತೆ ಕೇರಳದ ಬೈತೂರಪ್ಪ ದೇವಾಲಯ ಸನ್ನಿಧಿಯ ಶ್ರೀ ಕೋಮರತಚ್ಚ ದೈವ ಪಾತ್ರಿ ಹಾಗೂ ದೇವಳದ ತಕ್ಕ ಮುಖ್ಯಸ್ಥರು ಇಂದು ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಮತ್ತು ಜಿಲ್ಲಾ ಆಡಳಿತ ಭವನಕ್ಕೆ ಸಂದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಕೋಮರತಚ್ಚನಿಗೆ ಗೌರವ ಸಲ್ಲಿಸ ಲಾಯಿತು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ದೇವಾಲಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಬಳಿಕ ಜಿಲ್ಲಾ ಆಡಳಿತ ಭವನಕ್ಕೆ ತೆರಳಿ ಖಜಾನೆ ಪೂಜೆಯೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹ, ಉಪವಿಭಾಗಾಧಿಕಾರಿ ಟಿ. ಜವರೇಗೌಡ, ಖಜಾನೆ ವಿಭಾಗದ ಪದ್ಮಜ ಮತ್ತಿತರರು ಪಾಲ್ಗೊಂಡು ಸಂಪ್ರದಾಯದಂತೆ ಗೌರವದೊಂದಿಗೆ ಪ್ರಸಾದ ಸ್ವೀಕರಿಸಿದರು.

ಅನಂತರ ಈ ದೇವಳ ತಂಡ ಜಿಲ್ಲಾ ಪಂಚಾಯತ್ ನೂತನ ಭವನ ಸಂದರ್ಶಿಸಿ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರುಗಳ ಕಚೇರಿಯಲ್ಲಿ ಗೌರವ ಸ್ವೀಕರಿಸಿ ಸದ್ಭಕ್ತರಿಗೆ ಪ್ರಸಾದ ನೀಡಲಾಯಿತು. ಪುಗ್ಗೆರ ಕುಟುಂಬದ ತಕ್ಕರಾದ ಪೊನ್ನಪ್ಪ, ದೇವಾಲಯ ಪ್ರಮುಖರಾದ ರಂಜಿ ದೇವಯ್ಯ, ಶಿವಕುಮಾರ್, ಸುಬ್ಬಯ್ಯ ಮೊದಲಾದವರು ಕೋಮರತಚ್ಚನ್ ಜತೆಯಲ್ಲಿ ಉಪಸ್ಥಿತರಿದ್ದರು.

ಇಂದು ಇಲ್ಲಿಂದ ನಿರ್ಗಮಿಸಿದ ಈ ತಂಡ ಕುಂದ ಗ್ರಾಮದ ಕೊಡಂದೇರ ಕುಟುಂಬ ಸಂದರ್ಶಿಸಿ ಮರಳಿ ಬೈತೂರು ಸನ್ನಿಧಿಗೆ ನಿರ್ಗಮಿಸಲಿದೆ. ತಾ. 22, 23, 24 ರಂದು ಕೊಡಗಿನ ಪರವಾಗಿ ಅಲ್ಲಿನ ದೇವಳದ ಉತ್ಸವ ನಡೆಯಲಿದೆ.