‘ಶಕ್ತಿ’ಯಲ್ಲಿ ಪ್ರಕಟವಾಗುವ ಆರೋಗ್ಯ, ಶಿಕ್ಷಣ, ಆಧ್ಯಾತ್ಮ, ಕೃಷಿಲೋಕ, ಮಾಹಿತಿ, ಮಹಿಳಾಲೋಕ, ಕ್ರೀಡಾಲೋಕ, ಪ್ರಕೃತಿ-ಪರಿಸರ, ವ್ಯಕ್ತಿ ಪರಿಚಯ, ಕಾನೂನಿನ ಅರಿವು, ಹಾಸ್ಯಬರಹ, ವಾರದ ಕತೆ, ಕಾರ್ಡ್‍ನಲ್ಲಿ ಕತೆ, ಮಕ್ಕಳ ಕತೆ ಮುಂತಾದ ಅಂಕಣ ಗಳಿಗೆ ಆಸಕ್ತ ಲೇಖಕರಿಂದ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ.

ಇವಿಷ್ಟೇ ಅಲ್ಲದೆ ‘ಮುದ್ದುಕಂದ’ ವಿಭಾಗಕ್ಕೆ ನೀವು ನಿಮ್ಮ ಕುಟುಂಬದ ಒಂದರಿಂದ ಮೂರು ವರ್ಷದೊಳಗಿನ ಕಂದಮ್ಮಗಳ ಭಾವಚಿತ್ರಗಳನ್ನು ವಯಸ್ಸಿನ ದೃಢೀಕರಣದೊಂದಿಗೆ ಕಳುಹಿಸಿಕೊಡಬಹುದಾಗಿದೆ.

‘ನಮ್ಮೂರ ಆರಾಧನಾಲಯ’ ಅಂಕಣದಡಿ ಪ್ರಕಟಿಸಲು ನಿಮ್ಮೂರ ದೇವಾಲಯ, ಚರ್ಚ್, ದರ್ಗಾ-ಮಸೀದಿಗಳ ಮಹಿಮೆಯ ಕುರಿತೂ ಬರೆದು ಕಳುಹಿಸಬಹುದು.

ವಾಟ್ಸಾಪ್ ಸಂದೇಶಗಳು: ಜನರಿಗೆ ಉಪಯುಕ್ತವಾಗುವ, ಸಮಾಜ ದಲ್ಲಿ ಸೌಹಾರ್ದತೆಯನ್ನು ಮೂಡಿಸಬಲ್ಲ, ವಾಟ್ಸಾಪ್ ಸಂದೇಶಗಳಿದ್ದಲ್ಲಿ ಅವನ್ನೂ ಕಳುಹಿಸಿಕೊಡಬಹುದು.

ಪ್ರವಾಸ: ನೀವು ನಿಮ್ಮ ಕುಟುಂಬದೊಂದಿಗೆ ಇಲ್ಲವೆ ಬಂಧು ಮಿತ್ರರೊಂದಿಗೆ ನಡೆಸಿದ ಪುಣ್ಯಕ್ಷೇತ್ರಗಳ ಹಾಗೂ ಪ್ರವಾಸಿ ತಾಣಗಳ ಪ್ರವಾಸದ ಬಗ್ಗೆ ಚಿತ್ರ ಸಹಿತ ಸವಿವರ ಮಾಹಿತಿಗಳನ್ನೂ ಕಳುಹಿಸಿ ಕೊಡಬಹುದು.

ವಾರದ ಕತೆ: ಫುಲ್‍ಸ್ಕೇಪ್ ಹಾಳೆಯಲ್ಲಿ ಕೈಬರಹವಾದಲ್ಲಿ ಮೂರು ಪುಟ, ಡಿ.ಟಿ.ಪಿ. ಆಗಿದ್ದಲ್ಲಿ ಎರಡು ಪುಟಗಳನ್ನು ಮೀರದಿರಲಿ. ಕಾರ್ಡ್‍ನಲ್ಲಿ ಕತೆ ಹೊರತುಪಡಿಸಿ ಉಳಿದೆಲ್ಲ ಬರಹಗಳು ಕೈಬರಹದಲ್ಲಿ ಎರಡು ಪುಟ ಹಾಗೂ ಡಿ.ಟಿ.ಪಿ.ಯಲ್ಲಿ ಒಂದು ಪುಟ ಮೀರದಿರಲಿ.

ಬರಹಗಳೊಂದಿಗೆ ಲೇಖಕರ ಪಾಸ್‍ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್ ಸಂಪರ್ಕ ಸಂಖ್ಯೆ ಹಾಗೂ ಪೂರ್ಣ ವಿಳಾಸ ನಮೂದಿಸಿರಬೇಕು.

ವಿ.ಸೂ: ಅಪ್ರಕಟಿತ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪ್ರಕಟಿತ ಲೇಖನಗಳಿಗೆ ಸಂಭಾವನೆ ಕೊಡಲಾಗುವುದು.

ವಾಟ್ಸಾಪ್ ಸಂದೇಶಗಳನ್ನು 9964076698 ಸಂಖ್ಯೆಗೆ ಕಳುಹಿಸಿ.

ಲೇಖನಗಳನ್ನು ಕಳುಹಿಸಬೇಕಾದ ವಿಳಾಸ

ಸಂಪಾದಕ, ಶಕ್ತಿ ದಿನಪತ್ರಿಕೆ

ಕೈಗಾರಿಕಾ ಬಡಾವಣೆ, ಮಡಿಕೇರಿ.