ಪೆರಾಜೆ, ಜ. 8: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಚೆಂಬು ಗ್ರಾಮದಲ್ಲಿ ಒಟ್ಟು 7.50 ಕೋಟಿ ಮೊತ್ತದ ಅನುದಾನದಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಚೆಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್ ಊರುಬೈಲು ಮತ್ತು ಚೆಂಬು ಪಂಚಾಯತ್ ಸರ್ವ ಸದಸ್ಯರುಗಳು, ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ, ಪಯಶ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಅನಂತ ಊರುಬೈಲು, ಉಪಾಧ್ಯಕ್ಷ ದಯಾನಂದ ಪನೇಡ್ಕ, ಸಂಪಾಜೆ ಗ್ರಾಮದ ಹಿರಿಯರಾದ ಎನ್.ಎಸ್. ದೇವಿಪ್ರಸಾದ್, ವೆಂಕಪ್ಪ ಕಡಂಬಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ ಬಿಸಿಲುಮನೆ, ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು, ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ, ಗುತ್ತಿಗೆದಾರರುಗಳು, ಸಂಪಾಜೆ ಮತ್ತು ಚೆಂಬು ಗ್ರಾಮದ ಮುಖಂಡರುಗಳು, ಸಂಪಾಜೆ ಮತ್ತು ಚೆಂಬು ಗ್ರಾಮದ ಆಯಾಯ ಭಾಗದ ಸಮಸ್ತ ಗ್ರಾಮಸ್ಥರು ಹಾಜರಿದ್ದರು.
ಶಂಕುಸ್ಥಾಪನೆಯ ವಿವರ (ಚೆಂಬು)
ಊರುಬೈಲು ಚೆಂಬು (ಮಾರ್ಪಡ್ಕ) ಸಂಪರ್ಕ ರಸ್ತೆ ಸೇತುವೆ, ಅನ್ಯಾಳ ಹರಿಜನ ಕಾಲನಿ ರಸ್ತೆ, ಅನ್ಯಾಳದಲ್ಲಿ ಜಾಕ್ ವೆಲ್ಗೆ, ದಬ್ಬಡ್ಕ (ಕಾಳಪ್ಪ ಕಜೆ ವಸಂತರವರ ಅಂಗಡಿ ಪಕ್ಕ) ಪಿ.ಡ.ಬ್ಲ್ಯೂ.ಡಿ ರಸ್ತೆ, ದಬ್ಬಡ್ಕ ಕೊಪ್ಪ ರಸ್ತೆ, ಪೊಲ್ಮಾರ ಸೇತುವೆ ಉದ್ಘಾಟನೆ. ಪನೇಡ್ಕ ರಸ್ತೆ, ಮಾಪ್ಲಕಜೆ ರಸ್ತೆ, ಮೇಲ್ಚೆಂಬು- ಕುದ್ರೆಪಾಯ ಕಾಂಕ್ರೀಟ್ ರಸ್ತೆ ಉದ್ಘಾಟನೆ. ಕಟ್ಟಪಾರೆ ರಸ್ತೆ, ಕುದ್ರೆಪಾಯ ರಸ್ತೆಗೆ ಶಂಕುಸ್ಥಾಪನೆ.
ಸಂಪಾಜೆ ಗ್ರಾಮ ವ್ಯಾಪ್ತಿ
ಸಂಪಾಜೆ -ಬೈಲು ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ. ಸಂಪಾಜೆ-ಹೊದ್ದೆಟ್ಟಿ ಭಾಗದ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ. ಕಡಂಬಡ್ಕ ರಸ್ತೆ ಕಾಂಕ್ರೀಟ್ಕರಣ. ಅರೆಕಲ್ಲು ಪರಿಶಿಷ್ಟ ಪಂಗಡ ಭಾಗದ ರಸ್ತೆ ಕಾಂಕ್ರೀಟ್ಕರಣ. ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹತ್ತಿರ ರಸ್ತೆ. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ. ಸಂಪಾಜೆ-ಕುಂಠಿಕಾನ ರಸ್ತೆ ಕಾಂಕ್ರೀಟ್. ಸಂಪಾಜೆ- ಅಂಬಟೆಕಜೆ ಭಾಗದ ರಸ್ತೆ. ಸಂಪಾಜೆ-ಚೆಡಾವು-ಮಂಗಳಪಾರೆ ರಸ್ತೆ ಡಾಮರೀಕರಣ. ಚೆಡಾವು-ಮುಂಡಡ್ಕ ರಸ್ತೆ ಡಾಮರೀಕರಣ. ಕೊಯನಾಡು-ಗುಡ್ಡೆಗದ್ದೆ ರಸ್ತೆ ಡಾಮರೀಕರಣ. ಕೊಯನಾಡು-ಬೈಲು ರಸ್ತೆ ಡಾಮರೀಕರಣ. ಕೊಯನಾಡು -ಕಲ್ಲಾಳ ರಸ್ತೆ ಡಾಮರೀಕರಣ. ಕೊಯನಾಡು-ಕಲಾಯಿ ದಾಮೋದರ ಮನೆ ಭಾಗದ ಗುಡ್ಡೆಗದ್ದೆ ರಸ್ತೆ. ಕೊಯನಾಡು-ಬೈಲು ಭಾಗದ ಕುಡಿಯುವ ನೀರಿನ ನಳ್ಳಿ ನೀರು ಸಂಪರ್ಕಕ್ಕೆ ಪೈಪ್ ಲೈನ್ ಅಳವಡಿಕೆ. ಸಂಪಾಜೆ-ಅಂಬಟೆಕಜೆ ಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ. ಸಂಪಾಜೆ-ಅರೆಕಲ್ಲು ಭಾಗದಲ್ಲಿ ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಾಣ. ಸಂಪಾಜೆ-ಕುವೇಕಾಡು ಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ. ಸಂಪಾಜೆ- ಕುಂಬಾಡಿ ರಸ್ತೆಯಲ್ಲಿ ಬರುವ ಮರಿಕೆ ಭಾಗದಲ್ಲಿ ತಡೆಗೋಡೆ ಶಂಕುಸ್ಥಾಪನೆ. ಸಂಪಾಜೆ-ಚೆಡಾವು ಬಾಳೆಹಿತ್ಲು ಭಾಗದಲ್ಲಿ ಸಂಪರ್ಕ ರಸ್ತೆ. ಅರೆಕಲ್ಲು ರಸ್ತೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಂಕುಸ್ಥಾಪನೆ. ಸಂಪಾಜೆ ಬೈಲು ಭಾಗದ ಗದ್ದೆ ಬೇಸಾಯಕ್ಕೆ ನೀರಿನ ಕಾಲುವೆ ನಿರ್ಮಾಣ. ಸಂಪಾಜೆ ಕೊಲ್ಲೂರು ಕಟ್ಟದ ಹತ್ತಿರ ತಡೆಗೋಡೆ ನಿರ್ಮಾಣ. ಕೊಯನಾಡು ರಬ್ಬರ್ ಎಸ್ಟೇಟ್ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ. ಕೊಯನಾಡು ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ.
ಸಂಪಾಜೆ ಮತ್ತು ಚೆಂಬು ಗ್ರಾಮದಲ್ಲಿ ಕಾಮಗಾರಿ ನಡೆಯುವ ಆಯಾಯ ಭಾಗದ ಸಮಸ್ತ ಗ್ರಾಮಸ್ಥರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.