ಮಡಿಕೇರಿ, ಜ. 8: ಸಾರ್ವಜನಿಕ ರಸ್ತೆಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರೆವುಗೊಳಿಸುವ ಬಗ್ಗೆ ಸರ್ವೆ ಕಾರ್ಯ ನಡೆಸಿ ವರದಿಯನ್ನು ಸಲ್ಲಿಸಲು ನಿರ್ದೇಶನವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡಗಳು ಸ್ಥಾಪನೆಯಾಗಿರುವ ಕುರಿತು ಮಾಹಿತಿ ಲಭ್ಯವಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ ಮತ್ತು ಸಂಬಂಧಪಟ್ಟ ತಾಲೂಕು ತಹಶೀಲ್ದಾರರ ಕಚೇರಿ ಇ ಮೇಲ್, ದೂರವಾಣಿ ಮುಖಾಂತರ ಮಾಹಿತಿ ಸಲ್ಲಿಸಬಹುದಾಗಿದೆ. ಮಾಹಿತಿ ನೀಡಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸದೆ ರಹಸ್ಯವಾಗಿ ಇರಿಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಜeo.ಞoಜಚಿgu@gmಚಿiಟ.ಛಿom ದೂ.ಸಂ. 08272-225811, ಉಪ ವಿಭಾಗಾಧಿಕಾರಿ ಕಚೇರಿ ಚಿಛಿmಚಿಜiಞeಡಿi225469@gmಚಿiಟ.ಛಿom ದೂ.ಸಂ. 08272-225469, ಮಡಿಕೇರಿ ತಹಶೀಲ್ದಾರರ ಕಚೇರಿ ಣhಚಿsiಟಜಚಿಡಿmಜಞeಟಟಿ@gmಚಿiಟ.ಛಿom ದೂ.ಸಂ. 08272-228396, ವೀರಾಜಪೇಟೆ ತಹಶೀಲ್ದಾರರ ಕಚೇರಿ ಣಚಿhsiಟಜಚಿಡಿviಡಿಚಿರಿಠಿeಣ@gmಚಿiಟ.ಛಿom ದೂ.ಸಂ. 08274-257328, ಸೋಮವಾರಪೇಟೆ ತಹಶೀಲ್ದಾರರ ಕಚೇರಿ ಣಚಿhsiಟಜಚಿಡಿsomತಿಚಿಡಿಠಿeಣ@gmಚಿiಟ.ಛಿom ದೂ.ಸಂ. 08276-282045 ಇಮೇಲ್ ಅಥವಾ ದೂರವಾಣಿ
ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.