ಕುಶಾಲನಗರ, ಜ. 8: ಕುಶಾಲನಗರದ ಬೈಚನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜಿ.ಕೆ. ಜಲಜಾಕ್ಷಿ ರಾಜ್ಯಮಟ್ಟದ ಮಹಿಳಾ ಸಾಧನ ಶಿಕ್ಷಕಿ ಸದ್ಭಾವನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಕರ್ನಾಟಕ ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟ ವತಿಯಿಂದ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕಿ ಜಲಜಾಕ್ಷಿ ಅವರಿಗೆ 2019-20ನೇ ಸಾಲಿನ ಸಾಧನಾ ಸದ್ಭಾವನ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ತಾರಾ ಅನುರಾಧ, ಅರುಣ್ ಶಹಪೂರ್ ಚಲನಚಿತ್ರ ನಿರ್ದೇಶಕಿ ರೂಪ ಅಯ್ಯರ್, ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ವೆಂಕಟೇಶಯ್ಯ, ಉಪಾಧ್ಯಕ್ಷ ಸೊರಟ್ಟಿ, ಕಾರ್ಯಾಧ್ಯಕ್ಷ ಪವಾಡೆಪ್ಪ, ಕೋಶಾಧಿಕಾರಿ ಎಸ್.ಎಫ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಗುರು ತಿಗಡಿ ಇದ್ದರು.