ನಾಪೆÇೀಕ್ಲು, ಜ. 8: ಬಳ್ಳಾರಿಯ ಶಾಸಕ ಸೋಮಶೇಖರ್ ರೆಡ್ಡಿಯವರ ಪ್ರಚೋದನಕಾರಿ ಭಾಷಣವನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು ಶಾಸಕರಿಗೆ ಸಮಾಜದಲ್ಲಿ ಬಹಳಷ್ಟು ಜವಾಬ್ದಾರಿಗಳಿವೆ. ಬಹಿರಂಗ ಸಭೆಗಳಲ್ಲಿ ಜನರಲ್ಲಿ ಸಂಘರ್ಷವನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುವಂತಹ ಭಾಷಣವನ್ನು ಮಾಡುವ ಮೂಲಕ ಸಮಾಜದ ಅಶಾಂತಿಗೆ ಪ್ರೇರೇಪಿಸಿರುವ ಶಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.