ಮಡಿಕೇರಿ, ಜ. 8: ಫೀಲ್ಡ್ ಮಾಷರ್Àಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಎರಡನೇ ದಿನವಾದ ಬುಧವಾರ ನಗರದ ಫೀಲ್ಡ್ ಮಾಷರ್Àಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ‘ಬಹು ಮಾಧ್ಯಮ ಕಾರ್ಯಾಗಾರ’ ನಡೆಯಿತು.
ಕಾರ್ಯಗಾರದಲ್ಲಿ ಮೈಸೂರು ವಿವಿ ಪತ್ರಿಕೋದ್ಯಮದ ಉಪನ್ಯಾಸಕಿ ಸಪ್ನಾ ನಾಯ್ಕ್ ಅವರು ‘ಪತ್ರಕರ್ತ ಮತ್ತು ವೃತ್ತಿಯ ಸಿದ್ಧತೆ’ ಕುರಿತು ಮಾತನಾಡಿ, ಪತ್ರಿಕೋದ್ಯಮ ಮತ್ತು ವೃತ್ತಿಪರತೆ ಕಳೆದ ದಿನಗಳಲ್ಲಿ ಸಮಾಜ ಸೇವೆಯಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಉದ್ಯಮವಾಗಿ ಬೆಳೆದಿದೆ ಎಂದರು.
ಬೇರೆ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ನಾವು ಓದುತ್ತಿರುವ ಪಠ್ಯಗಳು ತೀರಾ ಹಳೆಯದಾಗಿದೆ. ಪತ್ರಿಕೋದ್ಯಮ ವೃತ್ತಿಗೆ ಭಾಷೆ ಮತ್ತು ಜ್ಞಾನ ಅತಿ ಮುಖ್ಯವಾದವು, ಎಲ್ಲಾ ವಿಚಾರಗಳ ಬಗ್ಗೆಯೂ ಕನಿಷ್ಟ ಜ್ಞಾನವನ್ನು ಹೊಂದಿರಬೇಕು. ಸಮರ್ಪಣೆ ಮತ್ತು ಆಸಕ್ತಿ ಇರಬೇಕು. ಬದಲಾವಣೆಗೆ ಮುಕ್ತವಾಗಿರಬೇಕು. ಈಗಿನ ವಿದ್ಯಾರ್ಥಿಗಳು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಉಪನ್ಯಾಸಕರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ವರದಿಗಾರ ಯು.ಎಚ್. ಕಾರ್ತಿಕ್ ಭಟ್ ಮಾತನಾಡಿ, ಪತ್ರಿಕೆಗಳನ್ನು ಡಿಜಿಟಲೀಕರಿಸಲಾಗಿದ್ದು, ಬೆರಳ ತುದಿಯಲ್ಲಿ ಸುದ್ದಿಗಳು ಲಭ್ಯವಿದೆ. ಅದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಎಲ್ಲಾ ಕ್ಷೇತ್ರಗಳ ತಾಂತ್ರಿಕ ಪದಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು. ಯಾವುದೇ ಸುದ್ದಿ ಮಾಡುವಾಗ ಸ್ಪಷ್ಟ ದಾಖಲೆಗಳಿಲ್ಲದೆ ಸುದ್ದಿಯನ್ನು ಬರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಇಳೆಯರಾಜ, ಮೋನಿಕ, ವೀರಾಜಪೇಟೆ ಕಾವೇರಿ ಕಾಲೇಜು ಉಪನ್ಯಾಸಕ ಐನಂಡ ಸೋಮಣÐ ಮತ್ತು ಇತರರು ಪಾಲ್ಗೊಂಡಿದ್ದರು. ಎಫ್.ಎಂ.ಸಿ. ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.