ಗೋಣಿಕೊಪ್ಪಲು. ಜ. 7: ಗೋಣಿಕೊಪ್ಪ ಕಾಮತ್ ನವಮಿ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ಪ್ರಗತಿಪರ ಚಿಂತಕರ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಹಿರಿಯರಾದ ಡಾ. ಐ.ಆರ್. ದುರ್ಗಾಪ್ರಸಾದ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪ್ರಗತಿಪರ ಚಿಂತಕ ವಿ.ಪಿ. ಶಶಿಧರ್ ಮಾತನಾಡಿ, ಪೌರತ್ವ ಕಾಯಿದೆ ಜಾರಿಗೊಂಡಲ್ಲಿ ನಾಗರಿಕ ಸಮಾಜ ಎದುರಿಸಬೇಕಾದ ಸಮಸ್ಯೆಗಳನ್ನು ವಿವರಿಸಿದರು.

ಭಾರತ ದೇಶ ಆರ್ಥಿಕವಾಗಿ ದಿವಾಳಿತನಕ್ಕೆ ತಲುಪಿದೆ. ಕೆಲಸವನ್ನು ಕಳೆದುಕೊಂಡವರು ಬೀದಿಗೆ ಬಿದ್ದಿದ್ದಾರೆ. ವ್ಯಾಪಾರ ಕುಸಿತ ಕಾಣಲು ಕೇಂದ್ರ ಸರ್ಕಾರ ಹೊಣೆ ಎಂದ ಅವರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ರಾಷ್ಟ್ರೀಯತೆ, ದೇಶಭಕ್ತಿ ಹೆಸರಿನಲ್ಲಿ ಮುಸ್ಲಿಮರನ್ನು ಅವಮಾನ ಮಾಡುತ್ತಿದ್ದಾರೆ. ಪೌರತ್ವ ಕಾಯಿದೆ ಅಡಿಯಲ್ಲಿ ದೇಶದಲ್ಲಿ ಅಶಾಂತಿಗೆ ಕೇಂದ್ರ ಸರ್ಕಾರ ಕಾರಣ ವಾಗಿದೆ ಎಂದು ಆರೋಪಿಸಿದರು.

ಪೌರತ್ವ ಕಾಯಿದೆಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಇಸ್ಲಾಂ ಹೆಸರನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಇಂತಹ ಕಾಯಿದೆ ಜಾರಿಗೆ ತರಲು ಹೊರಟಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಟಾಟುಮೊಣ್ಣಪ್ಪ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ ಅಚ್ಚುತ್ತನ್, ವಕೀಲರಾದ ಕೆ.ವಿ. ಸುನೀಲ್, ಸಮೀರ್, ಗಿರಿಜನ ಮುಖಂಡ ಪಿ.ಎಸ್. ಮುತ್ತ, ಚಿಂತಕ ಪಿಲಿಪೋಸ್ ಮ್ಯಾಥ್ಯೂ, ಪರಿಶಿಷ್ಟ ಮುಖಂಡ ಪರಶುರಾಮ್, ಗ್ರಾ.ಪಂ. ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಿ.ಎನ್. ಪ್ರಕಾಶ್, ಜೆ.ಕೆ. ಸೋಮಣ್ಣ, ರಾಜಶೇಖರ, ಮುರುಗ, ಯುವ ಮುಖಂಡ ಅಂಕಿತ್ ಪೊನ್ನಪ್ಪ, ಹಿರಿಯ ಮುಖಂಡರಾದ

ಎ.ಜೆ. ಬಾಬು, ಅಬ್ದುಲ್ ರೆಹಮಾನ್ ಬಾಪು, ಅಬ್ದುಲ್ ಸಮ್ಮದ್, ಕೆ.ಪಿ. ಜಲೀಲ್, ಶಾಜಿ ಅಚ್ಚುತ್ತನ್, ಪೊನ್ನಂಪೇಟೆಯ ಅಜೀಜ್, ಅಬ್ಸಲ್ ಬೇಗ್, ಗೋಣಿಕೊಪ್ಪಲುವಿನ ವಿ.ಎಸ್. ಸೂರ್ಯ, ಸತೀಶ್ (ಸಿಂಗಿ), ಇಬ್ರಾಹಿಂ, ಬೇಗೂರುವಿನ ಅಹಮ್ಮದ್, ಸಾದಲಿ ಮುಂತಾದವರು ಭಾಗವಹಿಸಿದ್ದರು. ಸಾಮಾಜಿಕ ಹೋರಾಟಗಾರ ಅಬ್ದುಲ್ ಜಲೀಲ್ ಸ್ವಾಗತಿಸಿದರು.