ಮಡಿಕೇರಿ, ಜ. 7: ಸೂರ್ಲಬ್ಬಿಯ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ತಾ. 11 ಹಾಗೂ ತಾ. 12 ರಂದು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಹಾಗೂ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು, ತಾ. 11 ರ ಬೆಳಿಗ್ಗೆ 9 ಗಂಟೆಯಯೊಳಗೆ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಬೇಕಾಗಿ ಹಳೆ ವಿದ್ಯಾರ್ಥಿಗಳ ಸಮಿತಿ ತಿಳಿಸಿದೆ.

ಪುರುಷರ ವಿಭಾಗದಲ್ಲಿ ಕಬ್ಬಡಿ, ಹಗ್ಗಜಗ್ಗಾಟ, ವಾಲಿಬಾಲ್, ಭಾರದ ಗುಂಡು ಎಸೆತ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, 100 ಮೀ. ಹಾಗೂ 1500 ಮೀ. ಓಟ ಹಾಗೂ ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ, ಕಬ್ಬಡಿ, ಭಾರದ ಗುಂಡು ಎಸೆತ, 100 ಮೀ. ಓಟ, ಮಡಿಕೆ ಹೊಡೆಯುವುದು, ಬಾಂಬ್ ಇನ್‍ದ ಸಿಟಿ ಸ್ಪರ್ಧೆಗಳು ಏರ್ಪಡಿಸಲಾಗಿದೆ.