ಸುಂಟಿಕೊಪ್ಪ, ಜ. 7: ಇಲ್ಲಿನ ಶ್ರೀ ಚಾಮುಂಡೇಶ್ವರಿ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ದೇವಸ್ಥಾನ ಆವರಣದ ಸುತ್ತ ಬೆಳೆದಿದ್ದ ಕಾಡು ಗಿಡ ಗಂಟಿಗÀಳನ್ನು ಭೂಮಿಕಾ ಸ್ತ್ರೀ ಶಕ್ತಿ ಸಂಘ, ಜನನಿ ಸ್ತ್ರೀ ಶಕ್ತಿ ಸಂಘ, ಸೂರ್ಯ ಸ್ತ್ರೀ ಶಕ್ತಿ ಸಂಘ, ಮತ್ತು ತಲೆಹೊರೆ ಕಾರ್ಮಿಕ ಕನ್ನಡ ಅಭಿಮಾನಿ ಸಂಘದ ಪದಾಧಿಕಾರಿಗಳು ಕಡಿದು ಸ್ವಚ್ಛ ಗೊಳಿಸುವುದರ ಮೂಲಕ ಶ್ರಮದಾನ ಮಾಡಿದರು.

ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಉಪಾಧ್ಯಕ್ಷ ಜಗನಾದೀಶ್ ರೈ, ಕಾರ್ಯದರ್ಶಿ ಡಾ. ಶಶಿಕಾಂತ್ ರೈ, ಸಹ ಕಾರ್ಯದರ್ಶಿ ಪಟ್ಟೆಮನೆ ಉದಯ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಹಾಗೂ ಶ್ರೀ ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವಮಣಿ ಹಾಜರಿದ್ದರು.