ಪೆÇನ್ನಂಪೇಟೆ, ಜ. 6: ದೇಶದ ಎಲ್ಲ ಕಾನೂನುಗಳಿಗೆ ಭಾರತದ ಸಂವಿಧಾನವೇ ಅಡಿಪಾಯ. ಸಂವಿಧಾನಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಸಂಖ್ಯಾಬಲದ ಮೂಲಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದು ದೇಶದ ಕಾನೂನನ್ನಾಗಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿ.ಎ.ಎ.) ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷÀನ್ (ಕೆ.ಎಂ.ಎ.) ಅಭಿಪ್ರಾಯ ಪಟ್ಟಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷೆ ದುದ್ದಿಯಂಡ ಎಚ್. ಸೂಫಿ ಹಾಜಿ ಅವರು, ಧರ್ಮವೊಂದನ್ನು ಪ್ರಮುಖ ಗುರಿಯಾಗಿಸಿಕೊಂಡು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019(ಸಿ.ಎ.ಎ.) ಸಂವಿಧಾನದ ಆರ್ಟಿಕಲ್-14ರ ಸ್ಪಷÀ್ಟ ಉಲ್ಲಂಘನೆ ಯಾಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಆಡಳಿತಾರೂಢರ ಉತ್ತಮ ಲಕ್ಷಣವಲ್ಲ. ಜಾತ್ಯತೀತ ಭಾರತದ ಎಲ್ಲ ಧರ್ಮದವರ ಸ್ವೀಕಾರಾರ್ಹ ಧರ್ಮಗ್ರಂಥವಾದ ಸರ್ವಶ್ರೇಷ್ಠ ಸಂವಿಧಾನದ ಆಶ್ರಯದ ವಿರುದ್ಧವಾಗಿ ದೇಶದ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವ ಬಗ್ಗೆ ಕೇಂದ್ರ ಸರಕಾರ ಇದುವರೆಗೂ ಸೂಕ್ತ ಸ್ಪಷ್ಟನೆ ನೀಡಿಲ್ಲ. ದೇಶದ ಸಂವಿಧಾನ ಪ್ರೇಮಿಗಳು ಮತ್ತು ಪ್ರಜಾಪ್ರಭುತ್ವ ವಿಶ್ವಾಸಿಗಳು ಇದೀಗ ಬೀದಿಗಿಳಿಯಲು ಇದೇ ಪ್ರಮುಖ ಕಾರಣ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ-2019ರ ವಿರುದ್ಧ ಕಾನೂನಾತ್ಮಕವಾಗಿ ಪ್ರತಿಭಟಿಸುತ್ತಿರುವವರ ವಿರುದ್ಧ ಹಲವಾರು ರೀತಿಯ ವ್ಯಾಖ್ಯಾನಗಳ ಟೀಕೆ ಕೇಳಿ ಬರತೊಡಗಿದೆ. ಆದರೆ ಕಾಯ್ದೆಯನ್ನು ಬೆಂಬಲಿಸುವವರು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮವೊಂದನ್ನು ಕೇಂದ್ರೀಕರಿಸಿ ಜಾರಿಗೊಳಿಸಲಾಗಿರುವ ಸಿ.ಎ.ಎ.ಕುರಿತು ಎಲ್ಲಿಯೂ ಮಾತನಾಡುತ್ತಿಲ್ಲ. ಸಿ.ಎ.ಎ. ಯನ್ನು ವಿರೋಧಿಸುತ್ತಿರುವರಿಗೂ ಬೆಂಬಲಿಸುತ್ತಿರುವವರಿಗೂ ದೇಶದ ಸಂವಿಧಾನ ಒಂದೇ ಆಗಿದೆ. ಹೀಗಿದ್ದು ವಾಸ್ತವವನ್ನು ಮರೆಮಾಚುವ ಅಗತ್ಯವೇನು ಎಂದು ಪ್ರಶ್ನಿಸಿದ ಡಿ.ಎಚ್. ಸೂಫಿ ಅವರು, ಭಾರತದ ಭೂ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಮಾನವಾದ ನ್ಯಾಯ ಹಂಚಿಕೆ ಅನ್ವಯಿಸಲಿದ್ದು, ಯಾವುದೇ ಕಾರಣಕ್ಕೂ ಸಮಾನ ನ್ಯಾಯ ರಕ್ಷಣೆ ನಿಷೇಧಿಸುವಂತಿಲ್ಲ ಎಂದು ಸಂವಿಧಾನದ ಆರ್ಟಿಕಲ್-14 ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದರೂ ಧರ್ಮದ ಆಧಾರದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಸಿ.ಎ.ಎ.ಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕಾದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಅಗತ್ಯವಾಗುತ್ತದೆ. ಇದರಿಂದ ಮಾತ್ರ ಸಿ.ಎ.ಎ. ಆಶಯ ಈಡೇರಲು ಸಾಧ್ಯ. ಈ ಕಾರಣಕ್ಕಾಗಿ ಮುಸ್ಲಿಮರಿಗೆ ಆತಂಕವಿದೆ. ಸೂಕ್ತವಾದ ಸ್ಪಷÀ್ಟನೆ ಮೂಲಕ ಮತ್ತು ಎನ್.ಆರ್.ಸಿ. ಮಾನದಂಡಗಳನ್ನು ದೃಢಪಡಿಸುವ ಮೂಲಕ ಕೇಂದ್ರ ಸರಕಾರ ಮುಸ್ಲಿಮರಲ್ಲಿ ಮನೆಮಾಡಿರುವ ಆತಂಕವನ್ನು ಪರಿಹರಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ಇದುವರೆಗೂ ಈ ಬಗ್ಗೆ ಅಧಿಕೃತ ಸ್ಪಷÀ್ಟನೆ ನೀಡಿಲ್ಲ. ಇದು ದೇಶದ ಮುಸ್ಲಿಮರಲ್ಲಿ ಸಹಜವಾಗಿಯೇ ಅಭದ್ರತೆ ಮೂಡಲು ಕಾರಣವಾಗಿದೆ. ನೆರೆ ರಾಷ್ಟ್ರವಾದ ನೇಪಾಳ, ಮಾಯನ್ಮಾರ್, ಭೂತಾನ್ ಮತ್ತು ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾಗಿರುವ ಸಮುದಾಯವನ್ನು ಸಿ.ಎ.ಎ.ಯಿಂದ ಹೊರತುಪಡಿಸಿ ಕಾನೂನು ಜಾರಿಗೊಳಿಸಲಾಗಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಧರ್ಮಾಧಾರಿತ ವರ್ಗೀಕರಣಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಇದರಿಂದ ಭಾರತದ ಮಣ್ಣಿನಲ್ಲಿ ಹುಟ್ಟಿ ಭಾರತದ ನೆಲದಲ್ಲೇ ಮಣ್ಣಾಗಬೇಕೆಂದು ಬಯಸುವ ಪ್ರತಿಯೊಬ್ಬ ಮುಸ್ಲಿಮರಿಗೆ ಇದೀಗ ಗೊಂದಲವಿದೆ. ಈ ನಡುವೆ ಕೇಳಿಬರುತ್ತಿರುವ ಹಲವು ವ್ಯಾಖ್ಯಾನಿತ ಹೇಳಿಕೆಗಳು ಮತ್ತಷ್ಟು ಅನುಮಾನ ಮೂಡಿಸುತ್ತಿದೆ ಎಂದರು.

ಇದೀಗ ಸಿ.ಎ.ಎ.ಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಗಳ ಸ್ವರೂಪ ಬದಲಾಗ ಬೇಕು. ಇದು ಕೇವಲ ಮುಸ್ಲಿಮರ ವಿಷÀಯವಾಗಿ ಕೇಂದ್ರೀಕೃತಗೊಳ್ಳದೆ ಬಹುಜನರ ಚಳವಳಿಯಾಗಿ ರೂಪು ಪಡೆಯಬೇಕು. ಈ ಚಳವಳಿ ಯಾವುದೇ ರಾಜಕೀಯ ಪಕ್ಷದ ಅಥವಾ ನಾಯಕರ ವಿರುದ್ಧವಾಗಬಾರದು. ಬದಲಿಗೆ ವಿವಿಧ ಧರ್ಮದ ತಳಸಮುದಾಯದವರ ವಿನಾಶಕ್ಕಾಗಿ ಸಂಚು ರೂಪಿಸಿ ಗುಪ್ತ ಕಾರ್ಯಸೂಚಿಯೊಂದಿಗೆ ಕಾರ್ಯಾಚರಿಸುತ್ತಿರುವ ದೇಶದ ಪಟ್ಟಭದ್ರ ಹಿತಾಶಕ್ತಿಗಳ ವಿರುದ್ಧ ಜನಾಂದೋಲನವಾಗಿ ರೂಪುಗೊಳ್ಳ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಚಳುವಳಿಗೆ ಪ್ರವಾದಿ ಮಹಮ್ಮದ್ ಪೈಗಂಬರ್ ಮತ್ತು ಮಹಾತ್ಮ ಗಾಂಧಿಯವರ ಅಹಿಂಸೆ, ಶಾಂತಿ ಮತ್ತು ಸಹನೆಯ ಆದರ್ಶದ ಪ್ರೇರಣೆ ಮಾನದಂಡವಾಗಬೇಕು ಎಂದು ಸೂಫಿ ಅವರು ಹೇಳಿದರು.

ಕೆ.ಎಂ.ಎ. ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಅವರು ಮಾತನಾಡಿ, 1881 ರಿಂದ ಆರಂಭಗೊಂಡ ದೇಶದ ಜನಗಣತಿ ಪ್ರತಿ 10 ವರ್ಷಗಳಿಗೊಮ್ಮೆ ಸಹಜ ಪ್ರಕ್ರಿಯೆಯಾಗಿ ನಡೆಯುತ್ತಿದೆ. ಆದರೆ 2020ರ ವೇಳೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಗಣತಿಯ ಸ್ವರೂಪವನ್ನು ಬದಲಿಸಿ ‘ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್.ಪಿ.ಆರ್.)ಎಂದು ಜಾರಿ ಗೊಳಿಸಿದೆ. ಪ್ರತಿಬಾರಿ ನಡೆಯುವುದಕ್ಕಿಂತ ವಿಭಿನ್ನವಾಗಿ 2020ರ ಜನಗಣತಿ ಕಾರ್ಯದಲ್ಲಿ ವ್ಯಕ್ತಿಯೊಬ್ಬರ ತಂದೆ ಮತ್ತು ತಾಯಿ ಹುಟ್ಟಿದ ಸ್ಥಳ ಎಂಬಿತ್ಯಾದಿ ವಿವರಗಳನ್ನು ದಾಖಲೆಗಳ ಸಹಿತ ಪ್ರತ್ಯೇಕವಾಗಿ ನಮೂದಿಸಬೇಕಿದೆ. ಇದೆಲ್ಲವೂ ಜನರನ್ನು ಗಂಭೀರ ಚಿಂತನೆಗೆ ಕೊಂಡೊಯ್ಯುತ್ತಿದೆ ಎಂದರಲ್ಲದೆ, ವಿಶ್ವದ ಎಲ್ಲಾ ದೇಶಗಳಲ್ಲಿ ಪೌರತ್ವ ಕಾಯ್ದೆ ನಿರಂತರವಾಗಿ ತಿದ್ದುಪಡಿಗೆ ಒಳಪಡುತ್ತಿದ್ದರೂ ಧರ್ಮದ ಆಧಾರದಲ್ಲಿ ಇದುವರೆಗೆ ಯಾವ ದೇಶದಲ್ಲಿಯೂ ತಿದ್ದುಪಡಿ ಯಾಗಲಿಲ್ಲ ಎಂದು ಹೇಳಿದರು.

ಸಿ.ಎ.ಎ. ಕೇವಲ ಮುಸ್ಲಿಮರಿಗೆ ಮಾತ್ರವಲ್ಲ. ಎಲ್ಲ ಧರ್ಮದ ತಳಸಮುದಾಯದವರನ್ನು ಹಂತಹಂತವಾಗಿ ಇದು ಬಾಧಿಸಲಿದೆ. ಇದನ್ನು ಸರಿಯಾಗಿ ಅರ್ಥೈಸಿ ಕೊಳ್ಳಬೇಕು. ಪರಿಣಾಮ ಏನೇ ಇದ್ದರೂ ಇದೀಗ ಈ ಕಾಯ್ದೆಯ ಆರಂಭಿಕ ಹಂತ ದೇಶದ ಸರ್ವೋಚ್ಚ ನ್ಯಾಯಾಲಯದ ನಿರೀಕ್ಷಣೆಯಲ್ಲಿ ರುವುದರಿಂದ ಜನರು ತಾಳ್ಮೆ ಕಳೆದುಕೊಳ್ಳದೆ ಆಶಾವಾದಿಗಳಾಗಿ ನ್ಯಾಯಯುತವಾದ ಮತ್ತು ಅಹಿಂಸೆಯ ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳುವುದೇ ಇಂದು ಉಳಿದಿರುವ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಎ. ಅಬ್ದುಲ್ಲಾ ಹಾಜಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ವೈ. ಆಲಿ ಮತ್ತು ಪೆÇಯಕೆರ ಎಸ್. ಮೊಹಮ್ಮದ್ ರಫೀಕ್ ಅವರು ಉಪಸ್ಥಿತರಿದ್ದರು.