ಮಡಿಕೇರಿ, ಜ. 5: ಭಾನುವಾರದ ರಜಾ ದಿನದಂದು ವಿಶ್ರಮಿಸುವುದನ್ನು ಮರೆತು, ಜಿಲ್ಲೆಯ ಯುವ ಪೀಳಿಗೆಯು ತಮ್ಮ ಭವಿಷ್ಯದ ಭದ್ರತೆಯೆಡೆಗೆ ಗಮನವಿಟ್ಟು ಬಿಸಿಲಿಗೂ ಅಂಜದೆ 9000 ಸಾವಿರ ಸಸಿಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಶಾಲನಗರದ ಸಮೀಪದ ನಿಸರ್ಗಧಾಮದಲ್ಲಿ ಟೊಯೋಟ ಕಿರ್ಲೋಸ್ಕರ್ ಸಂಸ್ಥೆಯ ವತಿಯಿಂದ ಕೊಡಗು ಫಾರ್ ಟುಮಾರೋ(ಕೆ.ಎಫ್.ಟಿ) ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ 1 ಎಕರೆ ಜಾಗದಲ್ಲಿ 9000 ಸಸಿಗಳನ್ನು ನೆಡಲಾಯಿತು. ಪ್ರತಿ 3x3 ಚದರ ಅಡಿ ಜಾಗದಲ್ಲಿ 3 ರೀತಿಯ ಸಸಿಗಳನ್ನು ಮಿಯಾವಾಕಿ ಎಂಬ ಗಿಡ ನೆಡುವ ಕ್ರಮವನ್ನು ಪಾಲಿಸಿ ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದ ಐಶ್ವರ್ಯ ವಿದ್ಯಾಸಂಸ್ಥೆ, ಜ್ಞಾನಗಂಗ ವಿದ್ಯಾಸಂಸ್ಥೆ, ಫಾತಿಮಾ ವಿದ್ಯಾಸಂಸ್ಥೆ, ಕ್ಲೀನ್ ಕೂರ್ಗ್ ಇನಿಷಿಯೇಟಿವ್(ಸಿ.ಸಿ.ಐ) ನ ಸೈಕ್ಲಿಸ್ಟ್‍ಗಳು, ಕುಶಾಲನಗರದ ಮಡಿಕೇರಿ, ಜ. 5: ಭಾನುವಾರದ ರಜಾ ದಿನದಂದು ವಿಶ್ರಮಿಸುವುದನ್ನು ಮರೆತು, ಜಿಲ್ಲೆಯ ಯುವ ಪೀಳಿಗೆಯು ತಮ್ಮ ಭವಿಷ್ಯದ ಭದ್ರತೆಯೆಡೆಗೆ ಗಮನವಿಟ್ಟು ಬಿಸಿಲಿಗೂ ಅಂಜದೆ 9000 ಸಾವಿರ ಸಸಿಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಶಾಲನಗರದ ಸಮೀಪದ ನಿಸರ್ಗಧಾಮದಲ್ಲಿ ಟೊಯೋಟ ಕಿರ್ಲೋಸ್ಕರ್ ಸಂಸ್ಥೆಯ ವತಿಯಿಂದ ಕೊಡಗು ಫಾರ್ ಟುಮಾರೋ(ಕೆ.ಎಫ್.ಟಿ) ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ 1 ಎಕರೆ ಜಾಗದಲ್ಲಿ 9000 ಸಸಿಗಳನ್ನು ನೆಡಲಾಯಿತು. ಪ್ರತಿ 3x3 ಚದರ ಅಡಿ ಜಾಗದಲ್ಲಿ 3 ರೀತಿಯ ಸಸಿಗಳನ್ನು ಮಿಯಾವಾಕಿ ಎಂಬ ಗಿಡ ನೆಡುವ ಕ್ರಮವನ್ನು ಪಾಲಿಸಿ ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದ ಐಶ್ವರ್ಯ ವಿದ್ಯಾಸಂಸ್ಥೆ, ಜ್ಞಾನಗಂಗ ವಿದ್ಯಾಸಂಸ್ಥೆ, ಫಾತಿಮಾ ವಿದ್ಯಾಸಂಸ್ಥೆ, ಕ್ಲೀನ್ ಕೂರ್ಗ್ ಇನಿಷಿಯೇಟಿವ್(ಸಿ.ಸಿ.ಐ) ನ ಸೈಕ್ಲಿಸ್ಟ್‍ಗಳು, ಕುಶಾಲನಗರದ ಮಿಯಾವಾಕಿ ಕ್ರಮ: ಈ ಕ್ರಮದಲ್ಲಿ ಸಸಿಗಳನ್ನು 3x3 ಚದರ ಅಡಿಯಲ್ಲಿ 3 ಜಾತಿಯ ಸಸಿಗಳನ್ನು ನೆಡುವದರಿಂದ ಸಸಿಗಳು ಅತೀ ಬೇಗ ಹಾಗೂ ದಟ್ಟವಾಗಿ ಬೆಳೆಯುತ್ತವೆ ಮಿಯಾವಾಕಿ ಎಂಬ ಜಪಾನಿನ ವಿಜ್ಞಾನಿ ಕಂಡು ಹಿಡಿದ ಕ್ರಮವಿದು.
28 ಜಾತಿಗಳು: ಹಲಸು, ಹೊಂಗೆ, ನೇರಳೆ, ಮಹಾಗನಿ, ಹತ್ತಿ, ಸೀಬೆ, ಬೀಟಿ, ಪುಲಿರ್ ಮಾವು, ಬಿಲ್ವಪತ್ರೆ, ನಂದಿ, ಮಾವು, ತಾರೆ, ನವಿಲಾಡಿ ಇತ್ಯಾದಿ ಸಸಿಗಳನ್ನು ನೆಡಲಾಯಿತು.
ಟೊಯೋಟ ಕಿರ್ಲೋಸ್ಕರ್ ಸಂಸ್ಥೆಯ ಆವರಣ ಸೇರಿ ರಾಮನಗರ, ಚೆನ್ನಪಟ್ಟಣ ಹಾಗೂ ಬಿಡದಿಯಲ್ಲಿ ಒಟ್ಟು 3 ಲಕ್ಷ ಮರಗಳನ್ನು ನೆಡುವ ಕಾರ್ಯಕ್ರಮವು ಸಂಸ್ಥೆಯಿಂದ ಆಗಿದ್ದು ಇದೀಗ 2 ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಬಳಲುತ್ತಿದ್ದ ಕೊಡಗಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನ ಸ್ಥಳೀಯ ಗಿಡಗಳ ಜಾತಿಯನ್ನು ಪರಿಶೀಲಿಸಿ ಇಲ್ಲಿಗೆ ಸೂಕ್ತವಾದಂತಹ ಗಿಡಗಳನ್ನು ಗುರುತಿಸಿ ಮಣ್ಣನ್ನು ಸಡಿಲಮಾಡ ಲಾಗಿದೆ. ಒಟ್ಟು 3 ವರ್ಷಗಳ ಕಾಲ ಸಸಿಗಳನ್ನು ಪೋಷಿಸುವ ಅಗತ್ಯವಿದ್ದು ಪ್ರತಿ 15 ದಿನಗಳಿಗೊಮ್ಮೆ ಸಸಿಗಳನ್ನು ಪರಿಶೀಲಿಸಿ ಅವುಗಳ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಸಂಘದ ಪ್ರಮುಖರು ತಿಳಿಸಿದರು.
ರೀಸೈಕಲ್ ಮತ್ತು ರೀಹೆಬಿಲಿಟೇಷನ್(ಮರುಬಳಕೆ ಹಾಗೂ ಪನರ್ವಸತಿ) ಕೆಎಫ್‍ಟಿ ಸಂಘದ ಮುಖ್ಯ ಗುರಿಯಾಗಿದ್ದು ಜಿಲ್ಲೆಯ ಹಲವೆಡೆ ಸ್ವಚ್ಛತಾ ಕಾರ್ಯ ಹಾಗೂ ಅರಣ್ಯೀಕರಣದ ಕೆಲಸವನ್ನು ಮಾಡುತ್ತಿದ್ದು ಇದೀಗ 2 ನೇ ಬಾರಿಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವು ಇದೇ ರೀತಿ ಕಾರ್ಯಕ್ರಮ ಮಾಡಿ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವುದು ಸಂಘದ ನಿಲುವಾಗಿದೆ.
ಮಡಿಕೇರಿಯಿಂದ ಕುಶಾಲನಗರದವರೆಗೆ ಸೈಕಲ್ ತುಳಿಯುತ್ತಾ ಫಿಟ್ನೆಸ್ ಹಾಗೂ ಸ್ವಚ್ಛತೆಯ ಮಹತ್ವವನ್ನು ಸಾರುತ್ತಾ ಈ ವೃಕ್ಷಾಂದೋಲನದಲ್ಲಿ ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸದಸ್ಯರು ಪಾಲ್ಗೊಂಡರು. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ಹಾಗೂ ಮಾಲಿನ್ಯ ತಡೆಗಟ್ಟಲು ಸೈಕಲ್ ಬಳಕೆಯನ್ನು ಹೆಚ್ಚಿಸುವಂತೆ ಸಂಘದ ಪ್ರಮುಖ ಅರುಣ್ ಅಪ್ಪಚ್ಚು ಈ ಸಂದರ್ಭ ಕರೆ ನೀಡಿದರು.
ಸಸಿಗಳನ್ನು ನೆಟ್ಟ ಬಳಿಕ ಸಸಿಗಳನ್ನು ಪ್ಯಾಕ್ ಮಾಡಲಾಗಿದ್ದ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡು ಈ ಕಾರ್ಯಕ್ರಮ ತಮಗೆ ಸಂತಸದ ಜೊತೆ ಕಲಿಕೆ ಯನ್ನೂ ನೀಡಿದ್ದಾಗಿ ತಿಳಿಸಿದರು.
ಸೋಮವಾರಪೇಟೆ, ಜ.5: ಕಳೆದ ಕೆಲ ತಿಂಗಳುಗಳಿಂದ ತಾಲೂಕಿನ ಚಿಕ್ಕತೋಳೂರು, ಕೊರ್ಲಳ್ಳಿ. ಹಣಕೋಡು ವ್ಯಾಪ್ತಿಯಲ್ಲಿ ಬೀಡುಬಿಟ್ಟು, ಶ್ವಾನಗಳ ಮೇಲೆ ಧಾಳಿ ನಡೆಸಿ, ಸಾರ್ವಜನಿಕ ವಲಯದಲ್ಲಿ ಭಯಾತಂಕ ಮೂಡಿಸಿದ್ದ ಚಿರತೆ, ತಂತಿಯ ಉರುಳಿಗೆ ಬಲಿಯಾಗಿದೆ.
ಚೌಡ್ಲು ಬೆಟ್ಟದ ಸುತ್ತಮುತ್ತಲ ಪರಿಸರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಇಂದು ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂಗಪ್ಪ ಎಂಬವರಿಗೆ ಸೇರಿದ ಕಾಫಿ ತೋಟದ ಪಕ್ಕದಲ್ಲಿರುವ ತೋಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೇಲಿಗೆ ಅಳವಡಿಸಿದ್ದ ತಂತಿ ಉರುಳಿಗೆ ಸಿಲುಕಿರುವ ಚಿರತೆಯ ಕುತ್ತಿಗೆ ಭಾಗ ಬಿಗಿದಿದ್ದು, ಒದ್ದಾಡಿ ಪ್ರಾಣಬಿಟ್ಟಿದೆ.
ಕಳೆದ ಏಳೆಂಟು ತಿಂಗಳಿನಿಂದ ಚಿಕ್ಕತೋಳೂರು ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ಚಿರತೆ, 5 ನಾಯಿಗಳ ಮೇಲೆ ಧಾಳಿ ನಡೆಸಿದ್ದು, 2 ನಾಯಿಯನ್ನು ಹೊತ್ತೊಯ್ದಿತ್ತು.
ಆದರೆ ಬೋನಿಗೆ ಬೀಳದ ಚಿರತೆ ಇಂದು ಹಾನಗಲ್ಲು ಶೆಟ್ಟಳ್ಳಿಯ ತೋಟದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟಿದೆ.
ಸುಮಾರು 4 ವರ್ಷ ಪ್ರಾಯದ ಗಂಡು ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಎಸಿಎಫ್ ನೆಹರು, ಆರ್.ಎಫ್.ಒ. ಶಮಾ, ಡಿಆರ್‍ಎಫ್‍ಒ ಮನು, ಗಾರ್ಡ್ ಮೋಹನ್, ವಾಚರ್ ಸುಂದರ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನಂತರ ಪಟ್ಟಣದ ಪಶುವೈದ್ಯ ಇಲಾಖೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಭತ್ತದ ಪೈರನ್ನು ನಾಶಪಡಿಸುವ ಕಾಡುಹಂದಿಗಳಿಗೆ ಒಡ್ಡಿದ್ದ ಉರುಳಿಗೆ ಚಿರತೆ ಬಲಿಯಾಗಿರಬಹುದು ಎಂದು ಸಂಶಯಿಸಲಾಗಿದೆ.