ಶನಿವಾರಸಂತೆ, ಜ. 6: ಕೊಡಗು ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ 75ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ತಾ. 22 ರಿಂದ ಫೆ. 5 ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ತಾ. 28 ರಿಂದ ಫೆ. 5 ರವರೆಗೆ ಜಯದೇವ ಜಾತ್ರಾ ಸಭಾಂಗಣದಲ್ಲಿ ಪ್ರತಿದಿನ ರಾತ್ರಿ ನಗೆ ನಾಟಕ, ರಸಮಂಜರಿ ಕಾರ್ಯಕ್ರಮ, ಜಾನಪದ ಜಾತ್ರೆ ಮುಂತಾದ ಮನೋರಂಜನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.