ಗೋಣಿಕೊಪ್ಪ ವರದಿ, ಜ. 5: ಕೇಂದ್ರ ಸರ್ಕಾರದ ವಿರುದ್ದ ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಸಂಘಟನೆ ತಾ. 8 ರಂದು ಕರೆ ನೀಡಿರುವ ಮುಷ್ಕರಕ್ಕೆ ಭಾರತ್ ಕಮ್ಯುನಿಸ್ಟ್ ಪಕ್ಷ ಕೊಡಗು ಘಟಕ ಬೆಂಬಲ ನೀಡಲಿದೆ ಎಂದು ಭಾರತ್ ಕಮ್ಯುನಿಸ್ಟ್ ಪಕ್ಷ ಕೊಡಗು ಘಟಕ ಜಂಟಿ ಕಾರ್ಯದರ್ಶಿ ಮಾಯಮುಡಿ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಮಿಕ ವರ್ಗಗಳ ಕಡೆಗಣನೆ ಸೇರಿದಂತೆ ಸುಮಾರು 17 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗುವು ದಾಗಿ ಹೇಳಿದರು. ಗೋಷ್ಠಿಯಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡ ಹಕ್ಕುಗಳ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ದಾದಾ ಮುತ್ತಪ್ಪ, ಸದಸ್ಯರಾದ ಬಿ.ಕೆ. ಶಾಂತಿ, ಎಚ್. ಡಿ. ಹೇಮಾ, ಎಚ್. ಟಿ. ರಮೇಶ್ ಇದ್ದರು.