ಪೊನ್ನಂಪೇಟೆ, ಜ. 6: ಇತ್ತೀಚೆಗೆ ಮಾನಂದವಾಡಿಯಲ್ಲಿ ಏಳು ದೇಶಗಳು ಪಾಲ್ಗೊಂಡಿದ್ದ ಅಂತರ್ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಶೋಟಕಾನ್ ಪ್ರಾಯೋಜ ಕತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಕುಮಿತೆ ವಿಭಾಗದಲ್ಲಿ ಬಿರುನಾಣಿ ಲಯನ್ಸ್ ವಿದ್ಯಾಸಂಸ್ಥೆ (ಸುಜ್ಯೋತಿ)ಯ ವಿದ್ಯಾರ್ಥಿಗಳಾದ ಕೆ.ಎನ್. ಗಾಯಕ್ ಪೊನ್ನಣ್ಣ ಪ್ರಥಮ, ಸಿ.ಬಿ. ತರುಣ್ ತಿಮ್ಮಯ್ಯ ದ್ವಿತೀಯ, ಕೆ.ಎನ್. ಅನೂಪ್ ಅಯ್ಯಪ್ಪ ಮತ್ತು ಎಂ. ಕೌಶಲ್ಯ ತೃತೀಯ ಸ್ಥಾನ ಪಡೆದುಕೊಂಡರು.

ಇವರಿಗೆ ಪೊನ್ನಂಪೇಟೆಯ ಶೋಟಕಾನ್ ಕರಾಟೆ ಶಾಲೆಯ ಸೆನ್ಸಾಯ್ ಬಿ.ಯಸ್. ಸಂತೋಷ್ ಕುಮಾರ್ ತರಬೇತಿ ನೀಡಿದ್ದಾರೆ.