ನಾಪೆÇೀಕ್ಲು, ಜ. 6: ಸಮೀಪದ ಹಳೇ ತಾಲೂಕು ಜುಮ್ಮಾ ಮಸೀದಿ ವತಿಯಿಂದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೌನ ಪ್ರತಿಭಟನೆ ನಡೆಯಿತು.

ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್. ಮಹಮ್ಮದ್ ಅಲಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸದಸ್ಯರು ನಾಪೆÇೀಕ್ಲು-ಹಳೇ ತಾಲೂಕು ಮುಖ್ಯ ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತು ಮೌನ ಪ್ರತಿಭಟನೆ ನಡೆಸುವದರ ಮೂಲಕ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎಸ್.ಸಾಧಿಕ್ ಅಲಿ, ಖತೀಬರಾದ ಅಲಿಸಹದಿ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್, ಎಂ.ಎಸ್.ಇಬ್ರಾಹಿಂ, ಸಫೀಕ್ ಮತ್ತಿತರ ಸದಸ್ಯರಿದ್ದರು.