ಗೋಣಿಕೊಪ್ಪ ವರದಿ, ಜ. 5: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾ. 18 ರಂದು ತೋಟಗಾರಿಕಾ ನವೋದ್ಯಮದ ಕಡೆಗೆ ಯುವಜನತೆ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದ್ದು, ತಾ. 15 ರೊಳಗೆ ಹೆಸರುಗಳನ್ನು ಕೆವಿಕೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9945035707, 89712 77809, 9945782383 ಸಂಪರ್ಕಿಸುವಂತೆ ಕೆವಿಕೆ ಮುಖ್ಯಸ್ಥ ಡಾ.ಸಾಜು ಜಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.