ಮಡಿಕೇರಿ, ಜ. 5: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ನಿ., ಮಡಿಕೇರಿ ಇದರ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಸಿದ “ಸೌಹಾರ್ದ ಸಹಕಾರಿ ದಿನಾಚರಣೆ’’ಯ ಸಮಾರಂಭವನ್ನು ಸಹಕಾರಿಯ ಅಧ್ಯಕ್ಷ ಚೋವಂಡ. ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂದರ್ಭ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಳಪ್ಪ ಅವರು, ಸಂಘದ ಕಾರ್ಯಚಟುವಟಿಕೆ ಕುರಿತು ವಿವರಿಸಿದರು. ಪ್ರಾರಂಭದಲ್ಲಿ 293 ಸದಸ್ಯರಿಂದ ಕಾರ್ಯರಂಭಸಿದ ಸಂಸ್ಥೆ ಇದೀಗ ಒಟ್ಟು 2025 ಸದಸ್ಯರಿರುತ್ತಾರೆ ಅವರಿಂದ ಸಂದಾಯವಾದ ಪಾಲುಹಣ ರೂ. 64 ಲಕ್ಷಗಳು ಇದ್ದು, ಸದಸ್ಯರುಗಳ ಪ್ರಯೋಜನಕ್ಕಾಗಿ, ಮರಣ ನಿಧಿ ಸ್ಥಾಪಿಸಿ ಸ್ವರ್ಗಸ್ಥರಾದ ಸದಸ್ಯರುಗಳ ಕುಟುಂಬಕ್ಕೆ ರೂ. 10,000 ಮರಣ ನಿಧಿ ಸಹಾಯಧನ ನೀಡಲಾಗುತ್ತಿದ್ದು ಹಾಲಿ 1100 ಸದಸ್ಯರುಗಳು ಮರಣ ನಿಧಿ ಸದಸ್ಯರಾಗಿರುತ್ತಾರೆ.

ಕೊಡಗು ಸೌಹಾರ್ದ ಸಹಕಾರಿ ಆರಂಭದಿಂದಲೇ ಉತ್ತಮವಾದ ಕೆಲಸವನ್ನು ನಿರ್ವಹಿಸುತ್ತಾ ಎಲ್ಲಾ ಸದಸ್ಯರುಗಳ ಬೇಕು ಬೇಡಿಕೆಗಳನ್ನು ಪೂರೈಸುತ್ತಾ ಲಾಭದಲ್ಲಿ ನಡೆಯುತ್ತ ಬಂದಿದೆ. ಹಾಗೂ ಪ್ರತೀ ವರ್ಷವು ಲಾಭದಿಂದ ಡಿವಿಡೆಂಡನ್ನು ನೀಡುತ್ತಾ ಬಂದಿದ್ದು 2019ರ ವಷಾಂತ್ಯದ ಲಾಭದಲ್ಲಿ ಶೇ. 9.50 ರಷ್ಟು ಡಿವಿಡೆಂಡನ್ನು ಸದಸ್ಯರುಗಳಿಗೆ ನೀಡಿರುತ್ತದೆ.

ಸಹಕಾರಿಯಲ್ಲಿ ವಿವಿಧ ತರಹದ ಠೇವಣಿ ಹಾಗೂ ಸಾಲವನ್ನು ನೀಡುತ್ತಿದ್ದು ನಿರಖು ಠೇವಣಿ, ಮಾಸಿಕ ಠೇವಣಿ, ಮಿತವ್ಯಯ ಠೇವಣಿ, ಉಳಿತಾಯ ಖಾತೆ ಇವೇ ಮೊದಲಾದ ಠೇವಣಿಗಳನ್ನು ಸದಸ್ಯರುಗಳಿಂದ ಪಡೆದು ಅಕರ್ಷಿಕ ಬಡ್ಡಿ ದರವನ್ನು ನೀಡುವುದರೊಂದಿಗೆ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದೆ. ಸದಸ್ಯರುಗಳ ಬೇಡಿಕೆಗೆ ಅನುಗುಣವಾಗಿ ಮನೆಸಾಲ, ಜಾಮೀನು ಸಾಲ, ಆಭರಣ ಸಾಲ, ಠೇವಣಿ ಮೇಲಿನ ಸಾಲ ಇವೇ ಮೊದಲಾದ ಸಾಲಗಳ್ನು ನೀಡುತ್ತಿದ್ದು, ಸದಸ್ಯರುಗಳಿಗೆ ಸಮಾಜಸವಾದ ರೀತಿ ಸಾಲದ ಮೇಲಿನ ಬಡ್ಡಿ ದರವನ್ನು ನಿಗದಿಮಾಡಲಾಗಿರುತ್ತದೆ.

ಸದಸ್ಯರುಗಳಿಂದ ಉತ್ತಮ ಸ್ಪಂದನೆಯೊಂದಿಗೆ, ಠೇವಣಿ ಸಂಗ್ರಹಣೆ ಹಾಗೂ ಸಾಲದ ವಸೂಲಾತಿಯಲ್ಲಿ ಗಣನಿಯ ಸಾಧನೆ ಮಾಡುತ್ತಿದ್ದು, ಆಡಳಿತ ಮಂಡಳಿ ಸದಸ್ಯರುಗಳ ಉತ್ತಮ ಬಾಂದವ್ಯದೊಂದಿಗೆ ಹಾಗೂ ಸಿಬ್ಬಂದಿ ವರ್ಗದಿಂದ ಸದಸ್ಯರುಗಳಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ ಎಂದು ವಿವರವಿತ್ತರು.

ಸಹಕಾರಿಯ ಕಾರ್ಯವೈಖರಿ ಯಲ್ಲಿ ಆಗಿರುವ ಪ್ರಗತಿಯನ್ನು ಪರಿಗಣಿಸಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ಮಡಿಕೇರಿಯು ಎರಡು ವರ್ಷದಿಂದ ಉತ್ತಮ ಸಹಕಾರಿಯೆಂದು ಪ್ರಥಮ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ ಎಂಬದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ 2018 ರ “ಸಹಕಾರ ರತ್ನ’’ ಪ್ರಶಸ್ತಿಯನ್ನು ಪಡೆದುಕೊಂಡಿರುವ ಮಂಡುವಂಡ ಪಿ. ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಾಧಕರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಸನ್ಮಾನ ಸ್ವೀಕರಿಸಿದ ಯಂ.ಪಿ. ಮುತ್ತಪ್ಪ ಮಾತನಾಡಿ, ಸಹಕಾರಿಯ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಆಡಳಿತ ಮಂಡಳಿ ಸದಸ್ಯರ ಆಡಳಿತಾವಧಿಯು 2020 ಮಾರ್ಚ್ ಅಂತ್ಯಕ್ಕೆ ಮುಗಿಯಲ್ಲಿದ್ದು, ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಬೈಲಾ ಪ್ರಕಾರ ಸದಸ್ಯರ ಹಕ್ಕು ಮತ್ತು ಕನಿಷ್ಟ ವ್ಯವಹಾರವನ್ನು ನಡೆಸಿ ಕೊಳ್ಳುವಂತೆ ತಿಳಿಸಿದರು.

ಸಂಘದ ಹಾಲಿ ಅಧ್ಯಕ್ಷರಾದ ಚೋವಂಡ. ಡಿ. ಕಾಳಪ್ಪ, ಉಪಾಧ್ಯಕ್ಷ ಪೇರಿಯಂಡ. ಎಂ. ಪೆಮ್ಮಯ್ಯ, ಆಡಳಿತ ಮಂಡಳಿ ಸದಸ್ಯರಾದ ಮಂಡುವಂಡ ಪಿ. ಮುತ್ತಪ್ಪ, ಅಲೆಮಾಡ ಕೆ. ಕಾರ್ಯಪ್ಪ, ಮಣವಟ್ಟೀರ ಬಿ. ಮಾಚಯ್ಯ, ನಾಟೋಳಂಡ ಡಿ. ಚರ್ಮಣ, ಕೊಂಗಾಂಡ ತಿಮ್ಮಯ್ಯ, ಪಟ್ಟಡ ಎ. ಕರುಂಬಯ್ಯ, ಕುಡುವಂಡ ಬಿ. ಉತ್ತಪ್ಪ, ನಂದೇಟಿರ ರಾಜಾ ಮಾದಪ್ಪ, ಕೇಕಡ. ಯಂ. ಸುಗುಣ, ಶಾಂತೆಯಂಡ ಟಿ. ದೇವರಾಜ್, ಅಂಜಪರವಂಡ ಉಷಾ ಉತ್ತಯ್ಯ, ಅಯ್ಯಂಡ. ಎಸ್. ಬೋಜಮ್ಮ, ವ್ಯವಸ್ಥಾಪಕರಾದ ಬಟ್ಟೀರ ಯಂ. ಚೋಂದಮ್ಮ, ಕಳ್ಳೇಂಗಡ. ಹೆಚ್. ನೀಮ, ಚೋವಂಡ. ಪಿ. ಗೌತಮ್ ಮೇದಪ್ಪ ಹಾಜರಿದ್ದರು.