ಸಿದ್ದಾಪುರ, ಜ. 5: ನಿನ್ನೆ ದಿನ ಮಹಿಳೆಯರ ನಡುವೆ ನಡೆದ ಕಲಹದಲ್ಲಿ ಮೃತ ಪಟ್ಟ ವಾಶಿಕಾದೇವಿಯ ಅಂತ್ಯಕ್ರಿಯೆ ಅರೆಕಾಡಿನಲ್ಲಿ ನಡೆಯಿತು. ಶನಿವಾರದಂದು ಅರೆಕಾಡುವಿನ ಬಳಂಜಿಗೆರೆಯ ಕಾಫಿ ತೋಟದಲ್ಲಿ ಜಾರ್ಖಂಡ್ ಮೂಲದ ದಯಾನಂದ್ ಎಂಬಾತನ ಇಬ್ಬರ ಪತ್ನಿಯರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಕಲಹದಲ್ಲಿ ವಾಶಿಕಾದೇವಿ ಸಾವನ್ನಪ್ಪಿದ್ದಳು. ಕೊಲೆ ಆರೋಪಿ ಆಶಿಕಾಗುಪ್ತಳನ್ನು ಸಿದ್ದಾಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.