ವೀರಾಜಪೇಟೆ, ಜ. 4: ಸಾಲ ಬಾಧೆÉಯಿಂದ ರೈತ ನೇಣಿಗೆ ಶರಣಾದ ಘಟನೆ ಹೆಗ್ಗಳದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ನಿವಾಸಿ ದಿವಂಗತ ಪೌಲೋಸ್ ಅವರ ಪುತ್ರ ಜಯನ್ ಜೋಸ್ (53) ನೇಣು ಬಿಗಿದು ಕೊಂಡು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಜೋಸ್ ಸಣ್ಣ ಹಿಡುವಳಿ ರೈತನಾಗಿದ್ದು ಒಂದು ಏಕ್ರೆ ಕಾಫಿ ತೋಟ ಹೊಂದಿದ್ದು, ತೋಟದ ನಿರ್ವಹಣೆ ಮತ್ತು ಮಕ್ಕಳ ಮದುವೆಗೆಂದು ಸುಮಾರು 2 ಲಕ್ಷ ಕೈಸಾಲ ಮಾಡಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಮೃತ ಜೋಸ್ ಅವರ ಪತ್ನಿ ತಂಗಮಣಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಮನೆಯ ಕೆಲಸ ಮಾಡಿ ಕೊಂಡಿದ್ದಾರೆ. ಮಕ್ಕಳಾದ ವಿನೋದ್ ಮತ್ತು ಸೌಮ್ಯ ಅವರಿಗೆ ಮದುವೆ ಯಾಗಿದ್ದು, ಜೋಸ್ ಒಬ್ಬಂಟಿಯಾಗಿ ಕಳೆದ ಎರಡು ತಿಂಗಳುಗಳಿಂದ ಹೆಗ್ಗಳ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ತಾ.3ರಂದು ರಾತ್ರಿ 9 ಗಂಟೆಗೆ ಮಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಇಂದು ಬೆಳಿಗ್ಗೆ ಮನೆ ಸನಿಹದ ನಿವಾಸಿಗಳು ಮನೆಗೆ ಬಂದು ನೋಡಿದಾಗ ಜೋಸ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾಧಿಕಾರಿ ವೀಣಾ ನಾಯಕ್ ಮತ್ತು ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಮಗ ವಿನೋದ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.