ಮಡಿಕೇರಿ, ಜ. 4: ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.

ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಶೆಡ್ ನಿರ್ಮಾಣ, ವಿದ್ಯಾನಗರದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು. ಒಳಚರಂಡಿ ಮಂಡಳಿ ಇಂಜಿನಿಯರ್, ನಗರಸಭೆ ಇಂಜಿನಿಯರ್ ವನಿತಾ ಇತರರು ಇದ್ದರು.